ಗೃಹ ಸಚಿವರ ಕ್ಷೇತ್ರದಲ್ಲಿ ಮತ್ತೊಂದು ಅವಘಡ: ವಿದ್ಯಾರ್ಥಿಯ ಸ್ಥಿತಿ ಗಂಭೀರ
1 min read
ಹಾವೇರಿ: ಕಳೆದ ಒಂದು ತಿಂಗಳಲ್ಲಿ ಗೃಹ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಸ್ಥಿತಿ ಅಯೋಮಯವಾಗಿದ್ದು, ಮೂರು ಮಕ್ಕಳು ಬ್ಯಾಡಗಿಯಲ್ಲಿ ತೀರಿಕೊಂಡು, ನಂತರ ಸವಣೂರು ಬಳಿಯ ಶಾಲೆಯಲ್ಲಿ ಗೇಟ್ ಬಿದ್ದು ಮಗುವೊಂದು ತೀರಿಕೊಂಡಿತ್ತು. ಇದೀಗ ಮತ್ತೊಂದು ಅವಘಡ ಸಂಭವಿಸಿದ್ದು, ವಿದ್ಯಾರ್ಥಿಯ ಜೀವನ ಅಯೋಮಯವಾಗಿದೆ.
ನಾಲ್ಕನೇಯ ತರಗತಿ ವಿದ್ಯಾರ್ಥಿ ವೀರಭದ್ರಪ್ಪ ಪೂಜಾರ ಎಂಬ ವಿದ್ಯಾರ್ಥಿ ಕ್ರಿಕೆಟ್ ಆಡುತ್ತಿದ್ದಾಗ ಕಂಪೌಂಡ ಜಿಗಿದು ಹೋಗುವಾಗ ಕಟ್ಟಿಗೆಯೊಂದು ತೊಡೆಯನ್ನೇ ಸೀಳಿದ್ದು, ಬಾಲಕನಿಗೆ ಅತೀವ ರಕ್ತಸ್ರಾವವಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿ ನಡೆದ ಈ ಘಟನೆ. ತಡವಾಗಿ ಬೆಳಕಿಗೆ ಬಂದಿದ್ದು, ಊರಹೊರಗಿನ ಹೊಲವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಹಿಡಿಯಲು ಹೋಗಿ ಕಂಪೌಂಡ ಜಿಗಿದಾಗ ಪಕ್ಕದಲ್ಲೇ ಇದ್ದ ಸೌಧೆ ತೊಡೆಯನ್ನ ಸೀಳಿದೆ.
ತೀವ್ರವಾಗಿ ಗಾಯಗೊಂಡಿದ್ದ ಬಾಲಕನಿಗೆ ಹಾವೇರಿಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸವಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.