Posts Slider

Karnataka Voice

Latest Kannada News

ಜಗದೀಶ ಶೆಟ್ಟರ ಮಗನಿಗೆ ಬೆಳಗಾವಿ ಲೋಕಸಭಾ ಟಿಕೆಟ್: ಜಗದೀಶ ಶೆಟ್ಟರ ಹೇಳಿದ್ದೇನು.. ಮಹತ್ವದ ಸಭೆಯಲ್ಲಿ ನಡೆದ ಚರ್ಚೆಯೇನು..

1 min read
Spread the love

ಹುಬ್ಬಳ್ಳಿ: ಸ್ಥಳೀಯ ಯಾವುದೇ ನಾಯಕರನ್ನೂ ಸಭೆಗೆ ಕರೆಯದೇ ರಾಜ್ಯ ಮಟ್ಟದ ನಾಯಕರು ಹಾಗೂ ಕೇಂದ್ರ ಸಚಿವರ ಉಪಸ್ಥಿತಿಯಲ್ಲಿ ನಗರದ ಖಾಸಗಿ ಹೊಟೇಲನಲ್ಲಿ ಸಭೆ ನಡೆದಿದ್ದು, ಪಕ್ಷದಲ್ಲಿನ ಆಂತರಿಕ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆಸಲಾಗಿದೆ.

ಸಭೆಯ ಬಗ್ಗೆ ಸಚಿವ ಜಗದೀಶ ಶೆಟ್ಟರ ಹೇಳಿದ್ದೇನು ಗೊತ್ತಾ..

 

ಪ್ರಮುಖ ನಾಯಕರು ಸಭೆ ನಡೆಸಿದ್ದು ನಿಜ.

ಕಾರ್ಯಕರ್ತರ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆ ಸೇರಿದ್ದೆವು.

ಬೆಳಗಾವಿ ಮತ್ತು ಮಸ್ಕಿ ರಾಜಕೀಯ ವಿಚಾರಗಳು ಚರ್ಚೆಗೆ ಬಂದಿವೆ.

ಪ್ರತಾಪ್‌ಗೌಡರಿಗೆ ಟಿಕೆಟ್ ಕೊಡುವುದಾಗಿ ಪ್ರಾಮಿಸ್ ಮಾಡಿದ್ದೇವೆ.

ಹೊಂದಾಣಿಕೆಯಿಂದ ಹೋಗುವಂತೆ ಸ್ಥಳೀಯ ನಾಯಕರಿಗೆ ಸೂಚಿಸಿದ್ದೇವೆ.

ಯತ್ನಾಳ್ ಹೇಳಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿಸುವ ವಿಚಾರ ಪ್ರಸ್ತಾಪವಾಗಿಲ್ಲ.

ಬೆಳಗಾವಿ ಚುನಾವಣೆ ಘೋಷಣೆಯಾದ ನಂತರ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸುತ್ತೇವೆ.

ಬಿಜೆಪಿ ರಾಜ್ಯಾಧ್ಯಕ್ಷರ ಬಳಿ ಪ್ರಮುಖರು ಅಹವಾಲು ಹೇಳಿಕೊಂಡಿದ್ದಾರೆ.

ತಮ್ಮ ಕ್ಷೇತ್ರದ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ, ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ಚರ್ಚೆ.

ಮಸ್ಕಿ ಕ್ಷೇತ್ರದಲ್ಲಿನ ಬಿಜೆಪಿ ಮುಖಂಡರ ಭಿನ್ನಾಭಿಪ್ರಾಯ ಶಮನಕ್ಕೆ ಸಂಧಾನ.

ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗಳ ಬಗ್ಗೆಯೂ ವಿಮರ್ಶೆ.

ನಳೀನ್ ಕುಮಾರ್ ಕಟೀಲ್, ಪ್ರಲ್ಹಾದ್ ಜೋಶಿ,  ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಮಹಾಂತೇಶ್ ಕೌಟಗಿಮಠ, ಆನಂದ ಮಾಮನಿ, ಬಾಲಚಂದ್ರ ಜಾರಕಿಹೋಳಿ, ಸಂಗಣ್ಣ ಕರಡಿ, ಪ್ರತಾಪ್‌ಗೌಡ ಪಾಟೀಲ್, ಮಹೇಶ್ ತೆಂಗಿನಕಾಯಿ ಸೇರಿದಂತೆ ಹಲವು ನಾಯಕರು ಭಾಗಿ.


Spread the love

Leave a Reply

Your email address will not be published. Required fields are marked *