ಶಾಲೆ ಆರಂಭಿಸಿದ ನಾಲ್ಕೇ ದಿನದಲ್ಲಿ 575 ವಿದ್ಯಾರ್ಥಿಗಳು, 172 ಶಿಕ್ಷಕರಿಗೆ ಕೊರೋನಾ
1 min read
ಆಂದ್ರಪ್ರದೇಶ: ಕೋವಿಡ್-19 ಮಾರ್ಗಸೂಚಿಗಳನ್ನ ಅನುಸರಿಸಿ ಶಾಲೆಗಳನ್ನ ಆರಂಭಿಸಿದ್ದ ರಾಜ್ಯ ಸರಕಾರ ನಾಲ್ಕೇ ದಿನಗಳಲ್ಲಿ ಬೆಚ್ಚಿ ಬೀಳುವ ಸ್ಥಿತಿಯನ್ನ ತಂದುಕೊಂಡಿದ್ದು, ಶಿಕ್ಷಣ ಇಲಾಖೆ ಕೂಡಾ ಏನೂ ಮಾಡಬೇಕೆಂದು ತೋಚದೆ ಕೂಡುವಂತಾದ ಘಟನೆ ನಡೆದಿದೆ.
ನವೆಂಬರ್ 2ರಿಂದ 9 ಮತ್ತು 10 ನೇ ತರಗತಿ ಶಾಲೆಗಳಲ್ಲಿ ಆಂದ್ರಪ್ರದೇಶದಲ್ಲಿ ಆರಂಭ ಮಾಡಲಾಗಿತ್ತು. ಕೋವಿಡ್-19ಗೆ ಸಂಬಂಧಿಸಿದ ಎಲ್ಲ ಮಾರ್ಗಸೂಚಿಗಳನ್ನೂ ಕಟ್ಟುನಿಟ್ಟಾಗಿ ಪಾಲನೆ ಮಾಡಿ, ಶಿಕ್ಷಣ ನೀಡಲು ಇಲಾಖೆ ಮುಂದಾಗಿತ್ತು. ಆದರೆ, ನಡೆದದ್ದೇ ಬೇರೆ. ಗೋದಾವರಿ ಜಿಲ್ಲೆಯೊಂದರಲ್ಲೇ 172 ಶಿಕ್ಷಕರಿಗೆ ಕೊರೋನಾ ಬಂದಿದೆ. 95763 ವಿದ್ಯಾರ್ಥಿಗಳನ್ನ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ 575 ವಿದ್ಯಾರ್ಥಿಗಳಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ರಾಜ್ಯದಲ್ಲಿ ನಾಲ್ಕು ದಿನಗಳಲ್ಲಿಯೇ 262 ವಿದ್ಯಾರ್ಥಿಗಳಿಗೆ ಹಾಗೂ 160 ಶಿಕ್ಷಕರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಶಿಕ್ಷಣ ಇಲಾಖೆಯೇ ಸಂಪೂರ್ಣ ಬೆಚ್ಚಿಬಿದ್ದಿದೆ. ಪ್ರಮುಖವಾಗಿ ಪಟ್ಟಣ ಪ್ರದೇಶಗಳಲ್ಲಿಯೇ ಹೆಚ್ಚು ಕಂಡು ಬಂದಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಕರ್ನಾಟಕದಲ್ಲೂ ಕೂಡಾ ಶಾಲೆಗಳನ್ನ ಆರಂಭಿಸಬೇಕೆಂಬ ಆಲೋಚನೆಗಳು ನಡೆಯುತ್ತಿರುವಾಗಲೇ ಪಕ್ಕದ ರಾಜ್ಯದಲ್ಲಿ ಕಂಡು ಬಂದಿರುವ ಈ ಪ್ರಕರಣ ಮತ್ತಷ್ಟು ಗಾಬರಿಯನ್ನ ಹುಟ್ಟಿಸುವಂತಿದೆ. ಹೀಗಾಗಿ ಕರ್ನಾಟಕದಲ್ಲಿ ಶಾಲೆಗಳ ಆರಂಭದ ಚರ್ಚೆ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಯಿದೆ.