ಎಐಸಿಸಿ-ಕೆಪಿಸಿಸಿಯಿಂದ ಶಹಬ್ಬಾಶ್ ಎನಿಸಿಕೊಂಡ ಸಂತೋಷ ಲಾಡ-ಉಪಚುನಾವಣೆಯಲ್ಲಿ ಅಲ್ಟಿಮೇಟ್ ವರ್ಕ್
1 min read
ತುಮಕೂರು: ಉಪಚುನಾವಣೆಯಲ್ಲಿ ಜಿಲ್ಲೆಯ ಶಿರಾ ಮತಕ್ಷೇತ್ರದಲ್ಲಿ ಹಗಲಿರುಳು ದುಡಿದ ಕಲಘಟಗಿ ಮತಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಸಂತೋಷ ಲಾಡ ಕಾರ್ಯವನ್ನ ಎಐಸಿಸಿ ಹಾಗೂ ಕೆಪಿಸಿಸಿ ಪ್ರಶಂಸಿದ್ದು, ಪಕ್ಷದ ಗೆಲುವಿನಲ್ಲಿ ಸಂತೋಷ ಲಾಡ ಪ್ರಮುಖ ಪಾತ್ರವಿರಲಿದೆ ಎಂದು ವ್ಯಾಖ್ಯಾನ ಮಾಡಿದೆ.
ಕಳೆದ ಹದಿನೈದು ದಿನಗಳಿಂದ ಕಾಂಗ್ರೆಸ್ ಪಕ್ಷದ ಸಲುವಾಗಿ ಸಂತೋಷ ಲಾಡ, ಶಿರಾ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೂ ತೆರಳಿದ್ದು, ಕಾರ್ಯಕರ್ತರ ಮನವೊಲಿಕೆಗೆ ನಿರಂತರವಾಗಿ ಪ್ರಯತ್ನಿಸಿದ್ದು, ಎಲ್ಲವನ್ನೂ ಎಐಸಿಸಿ ಮತ್ತು ಕೆಪಿಸಿಸಿ ಮನಗಂಡಿದೆ.
ಮಾಜಿ ಸಚಿವ ಸಂತೋಷ ಲಾಡ ಸಂಘಟನೆಯಲ್ಲಿ ಎತ್ತಿದ ಕೈ ಎಂಬುದನ್ನ ಈ ಮೂಲಕ ಮತ್ತೋಮ್ಮೆ ಸಾಬೀತು ಮಾಡಿದ್ದಾರೆ. ಕಾರ್ಯಕರ್ತರ ಸಮಸಸ್ಯೆಗಳನ್ನ ಸ್ಥಳದಲ್ಲಿಯೇ ನಿಭಾಯಿಸಿ, ಪಕ್ಷದ ಹಿರಿಯ ಮುಖಂಡ ಟಿ.ಬಿ.ಜಯಚಂದ್ರರವರ ಗೆಲುವಿಗಾಗಿ ಸಾಕಷ್ಟು ಪ್ರಯತ್ನವನ್ನ ಮಾಡಿರುವುದನ್ನ ಪಕ್ಷದ ಮುಖಂಡರು ಗುರುತಿಸಿದ್ದಾರೆ.
ಸಂತೋಷ ಲಾಡರವರ ಪ್ರಚಾರದ ತಂತ್ರವೂ ಪಕ್ಷದಲ್ಲಿ ಹೊಸತನವನ್ನ ಮೂಡಿಸಿರುವುದು ಸುಳ್ಳಲ್ಲ. ಾದರೆ, ಅವರದ್ದೇ ಕ್ಷೇತ್ರದಲ್ಲಿ ಕಾಂಗ್ರೆಸ್ ನಲ್ಲಿ ಹಲವರು ಗೊಂದಲ ಸೃಷ್ಟಿ ಮಾಡುತ್ತಿರುವುದು ಮಾತ್ರ ಸೋಜಿಗವೆನಿಸುತ್ತಿದೆ. ನಾನೂ ಕೆಪಿಸಿಸಿ ಅಧ್ಯಕ್ಷರಿಗೆ ಮಾತಾಡಿಸ್ಲಾ ಎನ್ನುತ್ತ ರಾಜಕಾರಣ ಮಾಡುವವರು ಒಂದು ಕಡೆ ಆದರೆ, ಕೆಪಿಸಿಸಿ ಅಧ್ಯಕ್ಷರಿಂದಲೇ ಪಕ್ಷ ಮುನ್ನಡೆಸುವ ಚಾಣಾಕ್ಷ ಸಂತೋಷ ಲಾಡ ಮತ್ತೊಂದು ಕಡೆ.