ಸಂತೋಷ ಲಾಡ ನಾಳೆ ಕಲಘಟಗಿಗೆ: ನೂತನ ವರ್ಷಾಚರಣೆ- ಗ್ರಾ ಪಂ ಸದಸ್ಯರ ಭೇಟಿ
1 min read
ಧಾರವಾಡ: ಮಾಜಿ ಸಚಿವ ಸಂತೋಷ ಲಾಡ ಅವರು ನಾಳೆ ಕಲಘಟಗಿಗೆ ಆಗಮಿಸಲಿದ್ದು, ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತಿ ಸದಸ್ಯರಿಗೆ ಸತ್ಕಾರ ಮಾಡಲಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚು ಗೆಲುವು ಸಾಧಿಸಿದ್ದು, ಲಾಡ ಬೆಂಬಲಿಗರಲ್ಲೂ ಹುಮ್ಮಸ್ಸು ಇಮ್ಮಡಿಸಿದೆ. ಇಂತಹ ಸಮಯದಲ್ಲಿ ಸಂತೋಷ ಲಾಡ ಆಗಮಿಸುತ್ತಿದ್ದು, ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಲಿದ್ದಾರೆ.
ಮಂಜುನಾಥ ಮುರಳ್ಳಿಯವರು ಮಾಡಿಕೊಂಡ ಮನವಿ
ಆತ್ಮೀಯರೇ,
ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರು,ಮಾಜಿ ಸಚಿವರಾದ ಸಂತೋಷ್ ಲಾಡ್ ನೇತೃತ್ವದಲ್ಲಿ , ನಾಳೆ ದಿನಾಂಕ 02:01:2021 ಶನಿವಾರ ರಂದು ಮಧ್ಯಾನ್ಹ 2ಘಂಟೆಯಿಂದ ಸಾಯಂಕಾಲ 6 ಘಂಟೆಯವರೆಗೆ ಕಲಘಟಗಿಯ ಅಮೃತ ನಿವಾಸದಲ್ಲಿ ನೂತನ ಗ್ರಾಮ ಪಂಚಾಯತ ಸದಸ್ಯರ ಭೇಟಿ ಹಾಗೂ ಹೊಸ ವರ್ಷದ ಆಚರಣೆಯನ್ನು ಏರ್ಪಡಿಸಲಾಗಿದೆ . ಆದ್ದರಿಂದ ತಾಲೂಕಿನ ಕಾಂಗ್ರೇಸ್ ಮುಖಂಡರು ಹಿರಿಯರು ಎಲ್ಲ ಜನಪ್ರತಿನಿದಿಗಳು ಎಲ್ಲ ಮುಂಚೂಣಿ ಘಟಕಗಳ ಪದಾಧಿಕಾರಿಗಳು, ಹಿರಿಯರು, ಜಿ.ಪಂ. ತಾ,ಪಂ. ಪ, ಪಂ.ಗ್ರಾ, ಪಂ. ಸದಸ್ಯರು ಆಗಮಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಇಂತಿ ತಮ್ಮ ಸೇವಕ
ಮಂಜುನಾಥಗೌಡ ಮುರಳ್ಳಿ.
ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ . ಕಲಘಟಗಿ