ಶಾಸಕ ಅಮೃತ ದೇಸಾಯಿ ಹೆಸರಲ್ಲಿ ‘ಮುರುಗೇಶ’ ಮರಳು ದಂಧೆ
1 min read
ಧಾರವಾಡ: ವಿದ್ಯಾನಗರಿಯಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದ್ದ ಧಾರವಾಡ ಹೊರವಲಯದಲ್ಲಿ ಅಕ್ರಮ ಅಡ್ಡೆಯು ಯಾವುದೇ ತೊಂದರೆಯಿಲ್ಲದೇ ನಡೆಯುತ್ತಿರುವುದಕ್ಕೆ ಧಾರವಾಡ ಶಾಸಕ ಅಮೃತ ದೇಸಾಯಿಯವರ ಹಿಂಬಾಲಕನೆಂದು ಪೋಸು ಕೊಡುತ್ತಿರುವ ವ್ಯಕ್ತಿಯೇ ಕಾರಣ ಎಂದು ಹೇಳಲಾಗುತ್ತಿದೆ.
ಮುರುಗೇಶ ಹೊನಕೇರಿ ಹಾಗೂ ಅಬ್ದುಲ್ ಬಂಕಾಪುರ ಎಂಬುವವರೇ ಎಗ್ಗಿಲ್ಲದೇ ಮರಳು ದಂಧೆಯನ್ನ ನಡೆಸುತ್ತಿದ್ದು, ಧಾರವಾಡದ ಪೊಲೀಸರ ಕಣ್ಣಿಗೂ ಕಾಣುತ್ತಿಲ್ಲವೇ ಎಂಬ ಪ್ರಶ್ನೆ ಮೂಡುತ್ತಿದೆ. ಮರಳು ತುಂಬಿದ ಲಾರಿಗಳು ಅನಾಯಾಸವಾಗಿ ಬಂದು ಹೋಗುವುದರಲ್ಲಿ ಮುರುಗೇಶನ ಕೈವಾಡವಿದೆಯಾದರೂ, ಶಾಸಕ ಅಮೃತ ದೇಸಾಯಿಯವರ ಹೆಸರು ಹೇಳಿಕೊಂಡು ದರ್ಭಾರ ನಡೆಸುತ್ತಿದ್ದಾನೆಂದು ಹೇಳಲಾಗಿದೆ.
ಧಾರವಾಡದಲ್ಲಿ ಆರು ಗಾಲಿನ ಟಿಪ್ಪರಗಳಲ್ಲಿ ಮರಳು ಬರುವುದು ಕಡಿಮೆಯಾದರೇ, ಈತ ಬೇರೆ ಕಡೆಯಿಂದ 12 ಗಾಲಿಯ ಲಾರಿಯಿಂದ ಮರಳು ತಂದು ಅಡ್ಡೆಯಲ್ಲಿ ಹಾಕಿಸುತ್ತಿದ್ದಾನೆಂಬುದನ್ನ ಸವದತ್ತಿ ರಸ್ತೆಯಲ್ಲಿರುವ ಅಡ್ಡೆಯನ್ನ ನೋಡಿದರೇ ಗೊತ್ತೆ ಆಗುತ್ತದೆ.
ಶಾಸಕ ಅಮೃತ ದೇಸಾಯಿ ಅವರ ಜೊತೆಗಿರುವ ಪೋಟೋಗಳನ್ನೇ ಮಾರುಕಟ್ಟೆಯಲ್ಲಿ ತೋರಿಸಿ, ತನ್ನ ದಂಧೆಯನ್ನ ನಡೆಸುತ್ತಿದ್ದಾನೆಂಬುದು ಬಹುತೇಕರ ದೂರು. ಇದಕ್ಕೆ ಸ್ವತಃ ಶಾಸಕರು ಉತ್ತರ ನೀಡಬೇಕಿದೆ. ಇಂತವರಿಂದ ತಮ್ಮ ಹೆಸರಿಗೆ ಮಸಿ ಬಳಿಯುತ್ತದೆ ಎಂಬುದನ್ನ ತಾವೂ ಅರಿತುಕೊಳ್ಳಬೇಕಿದೆ ಎಂಬುದು ಶಾಸಕ ದೇಸಾಯಿಯವರ ಗೌರವಿಸುವವರ ಬಯಕೆಯಾಗಿದೆ.
ಧಾರವಾಡದಲ್ಲಿರುವ ಎಸಿಪಿ ಜೆ.ಅನುಷಾ ಅವರು ಕೂಡಾ ಈ ಬಗ್ಗೆ ಗಮನ ನೀಡಬೇಕಿದೆ. ಎಗ್ಗಿಲ್ಲದೇ ನಡೆಯುತ್ತಿರುವ ಮರಳು ದಂಧೆಯಲ್ಲಿ ಈ ಮುರುಗೇಶ ಮತ್ತು ಅಬ್ಬು ಅಲಿಯಾಸ್ ಅಬ್ದುಲ್ ಮಾಡುತ್ತಿರುವುದೇನು ಎಂಬುದನ್ನ ಪತ್ತೆ ಹಚ್ಚಬೇಕಿದೆ. ಇವರೊಂದಿಗೆ ಸಂಪರ್ಕ ಹೊಂದಿರುವ ಪೊಲೀಸರಿಗೂ ಚಳಿ ಬಿಡಸಬೇಕಿದೆ..