ರಾಜ್ಯೋತ್ಸವದಂದು ರಕ್ತ ನೀಡಿದ ಮಹನೀಯರು- ಶ್ರೀ ಸಾಯಿ ಎಜ್ಯುಕೇಶನಲ್ ಟ್ರಸ್ಟನಿಂದ ರಕ್ತದಾನ ಶಿಬಿರ
1 min read
ಧಾರವಾಡ : ಇಲ್ಲಿನ ಶ್ರೀ ಸಾಯಿ ಎಜ್ಯುಕೇಶನಲ್ ಟ್ರಸ್ಟ್‌ನ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಹೊಂಬೆಳಕು ಫೌಂಡೇಶನ್, ಸಂಕಲ್ಪ ಯುವ ವೇದಿಕೆ ಮತ್ತು ರಾಷ್ಟ್ರೋತ್ಥಾನ ರಕ್ತ ಕೇಂದ್ರ ಸಹಯೋಗದಲ್ಲಿ 65 ನೇ ರಾಜ್ಯೋತ್ಸವ ಅಂಗವಾಗಿ ರಕ್ತ ದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಮೇಜರ ಮಂಜು ಗುಪ್ತಾ ಅವರು, ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ, ರಕ್ತದಾನ ಮಹಾದಾನ, ರಕ್ತದಾನಕ್ಕಿಂತ ದೊಡ್ಡ ದಾನ ಯಾವುದೂ ಇಲ್ಲ, ರಕ್ತದಾನವು ಒಂದು ರೀತಿಯ ಸಮಾಜ ಸೇವೆ ಎಂದರು. ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ರೂಪಿಸಬಹುದು, ಪ್ರಾಮಾಣಿಕತೆ ಹಾಗೂ ಸ್ಥಿರತೆಯಿಂದ ಇರುವ ಜೊತೆಗೆ ಆರೋಗ್ಯ ಕಾಳಜಿಯು ಕೂಡಾ ತುಂಬಾ ಮುಖ್ಯ ಎಂದು ಗುಪ್ತಾ ಹೇಳಿದರು.
ಅಥಿತಿಗಳಾಗಿ ಆಗಮಿಸಿದ್ದ ಭಾರತ ಸರ್ಕಾರದ ಸಹಾಯಕ ಸಾಲಿಸಿಟರ್ ಜನರಲ್ ಅರುಣ ಜೋಷಿ, ಎಲ್ಲರೂ ರಕ್ತದಾನವನ್ನು ಮಾಡಬೇಕು ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ.ವೀಣಾ ಬಿರಾದಾರ, ಎಲ್ಲಾ ಜಾತಿ, ಕುಲ, ವರ್ಣ, ಧರ್ಮವನ್ನು ಮೀರಿದ್ದು ರಕ್ತದಾನ. ಈ ದಾನ ಒಂದು ಸಮಾಜಮುಖಿ ಕಾರ್ಯಕ್ರಮ. ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿಯಾಗಲಿ ಎಂದು ಆಶಿಸಿದರು.
ಪ್ರಾಚಾರ್ಯ ಪ್ರೊ. ನಾಗರಾಜ ಶಿರೂರ ಪರಿಚಯಿಸಿದರು. ಪ್ರೊ.ಬಿ.ವಿ.ಮೋರಂಕರ್ ಸ್ವಾಗತಿಸಿದರು. ಪ್ರೊ.ಮೌನೇಶ್ವರ ನಿರೂಪಿಸಿದರು. ಡಾ.ಎಸ್.ಬಿ.ಗಾಡಿ, ಪ್ರೊ.ಎಸ್.ಎಮ್. ತಾರಿಹಾಳ, ಪ್ರೊ.ಸಾವಿತ್ರಿ ಪ್ರೊ.ಶಿವಾನಂದ ಪಾಟೀಲ, ಕರೆಪ್ಪ ಮೇಟಿ, ಗೀತಾ ಬಡಿಗೇರ, ವಿಜಯ ಹರಿಜನ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದ್ದರು.