ಧಾರವಾಡದಲ್ಲೊಂದು “ಆರ್ ಆರ್ ಎಂಟರಪ್ರೈಜಿಸ್” ಎಂಬ “ಸುಂದರ ಕಾವ್ಯ”
1 min read
ಧಾರವಾಡ: ನಾವೂ ಎಷ್ಟೇ ಎತ್ತರಕ್ಕೇ ಬೆಳೆಯಲಿ, ಎಷ್ಟೇ ಹಣವನ್ನ ಮಾಡಿರಲಿ, ನಾವೂ ಮಾತ್ರ ಹಳೆಯದನ್ನ ಮರೆಯಬಾರದು. ಆಗಲೇ, ನಾವೂ ಹೇಗಿದ್ವಿ.. ಹೇಗಾದ್ವಿ ಎಂದುಕೊಳ್ಳೋಕೆ ಸಾಧ್ಯ.. ನಿಮಗೆ ಆ ಮರೆವು ಆಗಿದ್ದರೂ ಇಲ್ಲೊಂದು ಸ್ಥಳ ನಿಮ್ಮ ಪೂರ್ವಜರನ್ನ ಸ್ಮರಿಸೋ ಹಾಗೇ ಮಾಡಿಯೇ ಮಾಡತ್ತೆ… ಅದೇ ಆರ್ ಆರ್ ಎಂಟರಪ್ರೈಜಿಸ್ ಎಂಬ ಸುಂದರ ಕಾವ್ಯ..
ಪೂರ್ಣವಾದ ವೀಡಿಯೋ ಇಲ್ಲಿದೆ ನೋಡಿ..
ಕಣ್ಣಿಗೆ ಖುಷಿ ಕೊಡುವಷ್ಟು ಪ್ರೀತಿಯನ್ನ ಈ ಆರ್ ಆರ್ ಎಂಟರಪ್ರೈಜಿಸ್ ಜನರಿಗೆ ಕೊಡಲು ಮುಂದಾಗಿದೆ. ಅಂದ ಹಾಗೇ, ಇದು ಧಾರವಾಡದ ಉಪನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ, ಡಿಮಾನ್ಸ್ ಎದುರಿಗೆ ಇರುವ ಗಿಫ್ಟ್ ಸೆಂಟರ್. ಒಳಗೆ ಹೋದರೇ, ನಗುಮುಖದೊಂದಿಗೆ ಭಿನ್ನ ವಿಭಿನ್ನವಾದ ಗಿಫ್ಟಗಳು ನಿಮ್ಮನ್ನ ಸೆಳೆಯುತ್ತವೆ.. ಇದನ್ನ ಉದ್ಘಾಟಿಸಿದ್ದು ಬೈಲಹೊಂಗಲದ ಶ್ರೀ ಅಭಿನವ ಸಿದ್ಧಲಿಂಗ ಸ್ವಾಮಿಗಳು..
ಈ ಗಿಫ್ಟ್ ನ ಹೆಸರಿನಲ್ಲೂ ಸಾಕಷ್ಟು ಮೌನದ ಪ್ರೀತಿ ಅಡಗಿದೆ. ಕಳೆದು ಹೋದ ತಾಯಿಯ ಹೆಸರು ಮತ್ತು ಪಕ್ಕದಲ್ಲೇ ಇದ್ದರೂ ಮುದ್ದಿಸಲಾರದ ಮಗುವಿನ ಮೊದಲ ಅಕ್ಷರದಿಂದಲೇ ಈ ಸುಂದರ ಕಾವ್ಯ ಆರ್.ಆರ್.ಎಂಟರಪ್ರೈಜಿಸ್ ಆರಂಭವಾಗಿರುವುದು. ಹಾಗಾಗಿಯೇ, ಇಲ್ಲಿ ವ್ಯಾಪಾರ ನಡೆಯುವುದಕ್ಕಿಂತ ಸಂಬಂಧಗಳು ಬೆಸೆಯುತ್ತವೇ. ಕಟ್ಟಿಗೆ ಹಾಗೂ ಬಿದಿರಿನಿಂದ ಮಾಡಿದ ಕಲಾಕೃತಿಗಳು ಈ ಅಂಗಡಿಯಲ್ಲಿವೆ. ನೀವೂ ಪ್ರೀತಿಸುವ ಮನಸ್ಸುಗಳಿಗೆ ಮುದ ಕೊಡುವ ಗಿಫ್ಟ್ ಗಳು ನಿಮ್ಮನ್ನ ಆಕರ್ಷಸಿಸದೇ ಇರಲಾರದು.