ಇಬ್ರು ಪಿಎಸೈ-ಓರ್ವ ಜಮಾದಾರ ನಾಳೆಯಿಂದ ಕರ್ತವ್ಯಕ್ಕೆ ಬರೋದಿಲ್ಲ: ಅದ್ಕೆ ಎಸ್ಪಿಯವರು ಏನು ಮಾಡಿದ್ರು ಗೊತ್ತಾ..
1 min read
ಧಾರವಾಡ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇಂದು ಎಲ್ಲರೂ ಬೆರಗುಗೊಳಿಸುವಂತೆ ನಡೆದುಕೊಂಡರು. ಮೊದಲೇ ನಿರ್ಧಾರ ಮಾಡಿದಂತೆ ಆ ಮೂವರು ಅಧಿಕಾರಿಗಳನ್ನ ಕಚೇರಿಗೆ ಬರಲು ಹೇಳಿದ್ದರು. ಎಲ್ಲರೂ ಅವರನ್ನಷ್ಟೇ ಏಕೆ ಕರೆದರು ಎಂದುಕೊಂಡಿದ್ದರೂ.. ಆದರೆ..
ಇವತ್ತು ಆ ಮೂವರು ಅಧಿಕಾರಿಗಳು ಇಲಾಖೆಯನ್ನ ಬಿಟ್ಟು ಹೊರಟು ನಿಂತಿದ್ದರು. ಅದಕ್ಕೆ ಕಾರಣವಾಗಿದ್ದು ಅವರ ವಯಸ್ಸು. ಹೌದು.. ಇವತ್ತು ಆ ಮೂವರು ಅಧಿಕಾರಿಗಳು ವಯೋನಿವೃತ್ತಿಯಾದರು. ಅದೇ ಕಾರಣಕ್ಕೆ ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರನ್ನ ಕಚೇರಿಗೆ ಕರೆಯಿಸಿ ಗೌರವದಿಂದ ಆಧರಿಸಿದರು.
ಪಿಎಸ್ಐ ಪಿ.ವಾಯ್.ಕಾಳಿ, ಸಿಇಎನ್ ಠಾಣೆಯ ಮಹಿಳಾ ಪಿಎಸ್ಐ ಭಾನು ಕುಲಕರ್ಣಿ, ಗುಡಗೇರಿ ಪೊಲೀಸ್ ಠಾಣೆಯ ಹವಾಲ್ದಾರ ಎಂ.ಬಿ.ಹೆಬ್ಬಾಳ ಇಂದು ವಯೋನಿವೃತ್ತಿ ಹೊಂದಿದರು. ಪ್ರತಿಯೊಬ್ಬರಿಗೂ ಪ್ರೀತಿಯಿಂದ ಗೌರವಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ನಿವೃತ್ತಿ ಜೀವನ ಚೆನ್ನಾಗಿರಲಿ ಎಂದು ಹಾರೈಸಿದರು.
ತಮ್ಮನ್ನ ಹಿರಿಯ ಅಧಿಕಾರಿ ಕಚೇರಿಗೆ ಕರೆಸಿಕೊಂಡು ಸತ್ಕರಿಸಿದ್ದನ್ನ ಸ್ಮರಿಸಿಕೊಂಡ ಮೂವರು, ಇಂತಹದನ್ನ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಮಿಸಿದರು.