ಏ ಬಾಯಿ ಮುಚ್ಚು ಮಗನೇ.. ಕಮರಿಪೇಟೆ ಇನ್ಸಪೆಕ್ಟರ್ ಆವಾಜ್ ಹಾಕಿದ್ದು ಯಾರಿಗೆ ಗೊತ್ತಾ..!
1 min read
ಹುಬ್ಬಳ್ಳಿ: ಯಾರ ಯಾರ ಮನೆಯಲ್ಲಿ ಏನೇನು ಮಾರಕಾಸ್ತ್ರಗಳಿವೆ ಹೇಳಿ. ನಮಗೆ ಗೊತ್ತಾದರೇ ಸುಮ್ಮನೆ ಬಿಡೋದಿಲ್ಲ. ನೀವಾಗಿಯೇ ಹೇಳಿದರೇ ಬಚಾವ್ ಆಗ್ತೀರಿ ಎಂದು ತಿಳುವಳಿಕೆ ನೀಡುತ್ತಲೇ ಎಚ್ಚರಿಕೆ ನೀಡಿದ್ದು ಬೇರಾರೂ ಅಲ್ಲ, ಕಮರಿಪೇಟೆಯ ಇನ್ಸಪೆಕ್ಟರ್ ಬಿ.ಟಿ.ಬುದ್ನಿ.
ಹೌದು.. ಪೊಲೀಸ್ ಠಾಣೆಯಲ್ಲಿ ರೌಡಿ ಷೀಟರಗಳ ಪರೇಡ್ ನಡೆಸಿದ ಇನ್ಸಪೆಕ್ಟರ್ ಬಿ.ಟಿ.ಬುದ್ನಿ, ಸಮಾಜದಲ್ಲಿ ಆತಂಕ ಸೃಷ್ಟಿ ಮಾಡುವುದನ್ನ ನಾವು ಸಹಿಸುದಿಲ್ಲ. ನೀವೇ ನೀವಾಗಿ ಹೇಳಿ. ಮನೆಯಲ್ಲಿರುವ ಮಾರಕಾಸ್ತ್ರಗಳನ್ನ ತಂದು ಒಪ್ಪಿಸಿ. ಇಲ್ಲದಿದ್ದರೇ ನಾವೇ ರೇಡ್ ಹಾಕಿ, ನಿಮ್ಮ ಬಂಡವಾಳವನ್ನ ಹೊರಗೆ ಹಾಕ್ತೇವಿ ಎಂದು ಎಚ್ಚರಿಸಿದರು.
ರೌಡಿ ಷೀಟರಗಳ ಬಗ್ಗೆ ಜನರಲ್ಲಿ ಮತ್ತೆ ಆತಂಕ ಸೃಷ್ಟಿಯಾದರೇ ಪೊಲೀಸರು ಸುಮ್ಮನೆ ಕೂರುವ ಪ್ರಶ್ನೆ ಬರೋದಿಲ್ಲ. ಈಗಾಗಲೇ ನಮಗೆ ಮಾಹಿತಿ ಬಂದಿದೆ. ಯಾರ ಯಾರ ಮನೆಯಲ್ಲಿ ಎಂತಹ ಆಯುಧಗಳಿವೆ ಎಂದು. ನೀವೇ ನಾಳೆಯೊಳಗೆ ತಂದು ಒಪ್ಪಿಸಬೇಕು ಇಲ್ಲದಿದ್ದರೇ ಮುಂದಿನ ಕ್ರಮವನ್ನ ನಾವೂ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ರು.
ಕಮರಿಪೇಟೆ ಠಾಣೆಯಲ್ಲಿ ಐವತ್ತಕ್ಕೂ ಹೆಚ್ಚು ರೌಡಿ ಷೀಟರಗಳನ್ನ ಕರೆತಂದು ಎಚ್ಚರಿಕೆ ನೀಡಲಾಯಿತು. ಸಾರ್ವಜನಿಕ ಬದುಕಿನಲ್ಲಿ ಚೆನ್ನಾಗಿ ಜೀವನ ನಡೆಸಿದ್ರೇ ಮಾತ್ರ, ಪೊಲೀಸರ ಸಹಕಾರ ಇರತ್ತೆ ಎಂಬುದನ್ನ ತಮ್ಮದೇ ಧಾಟಿಯಲ್ಲಿ ಇನ್ಸಪೆಕ್ಟರ್ ಬುದ್ನಿ ಹೇಳಿದರು.