ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಪೊಲೀಸ್ ಗೆ ಡಿಕ್ಕಿ ಹೊಡೆದ ಆಟೋ..
1 min read
ಹುಬ್ಬಳ್ಳಿ: ರಜೆಯಲ್ಲಿದ್ದ ಪೊಲೀಸರೋರ್ವರು ಮದುವೆಗೆ ಹೋಗುತ್ತಿದ್ದ ಸಮಯದಲ್ಲಿ ಆಟೋರಿಕ್ಷಾವೊಂದು ಡಿಕ್ಕಿ ಹೊಡೆದ ಪರಿಣಾಮ ಕಾಲಿಗೆ ತೀವ್ರವಾದ ಗಾಯಗಳಾದ ಘಟನೆ ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ.
ಚೆನ್ನಮ್ಮ ವೃತ್ತದಲ್ಲಿ ರೆಡ್ ಸಿಗ್ನಲ್ ಬಿದ್ದರೂ ಆಟೋ ಚಾಲಕ ಆಟೋ ನಿಲ್ಲಿಸದೇ ಹೊರಟಾಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಮನಸಾಲಿ ಎಂಬ ಟ್ರಾಫಿಕ್ ಪೊಲೀಸರ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಪೊಲೀಸ್ ಬೈಕಿನಿಂದ ಬಿದ್ದು ಕಾಲು ನೋವು ಮಾಡಿಕೊಂಡರು.
ಚೆನ್ನಮ್ಮ ವೃತ್ತದಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸರು ತಕ್ಷಣವೇ ಬಿದ್ದ ಪೊಲೀಸರನ್ನ ಎಬ್ಬಿಸಿ, ಆಟೋದವನಿಗೆ ಬುದ್ಧಿ ಹೇಳಿ ಮನೆಗೆ ಕಳಿಸಿದರು. ತೀವ್ರವಾದ ಒಳ ನೋವಿನಿಂದ ಬಳಲುತ್ತಿದ್ದ ಪೊಲೀಸನನ್ನ ಬೇರೆ ಆಟೋದಲ್ಲಿ ಮನೆಗೆ ಕಳಿಸುವ ವ್ಯವಸ್ಥೆಯನ್ನ ಮಾಡಲಾಯಿತು.
ಕಾನೂನು ಪಾಲಕರಿಗೂ ಇಂತಹ ಸಂಕಷ್ಟಗಳು ಬಂದಾಗ, ಬಡವರನ್ನ ನೋಡಿ, ತಾವೇ ಸಹಿಸಿಕೊಂಡು ಮುನ್ನಡೆಯುವ ಇಂತವರು ಇಲಾಖೆಯಲ್ಲಿರುವುದರಿಂದ, ಜನರಲ್ಲಿ ಮತ್ತಷ್ಟು ಪ್ರೀತಿಯಿರೋದು.