ಪೊಲೀಸ್ ಹೊನ್ನಪ್ಪ 2000ಸಾವಿರ ಕೊಟ್ಟಿದ್ದೇಕೆ: ಕಣ್ಣು ಕಳೆದಿದ್ದು ಯಾರೂ ಗೊತ್ತಾ..
1 min read
ಹುಬ್ಬಳ್ಳಿ: ಮನೆಯಲ್ಲಿ ಮಲಗಿದ್ದ ಯುವಕನನ್ನ ಕರೆದುಕೊಂಡು ಹೋಗಿ ಕಣ್ಣನ್ನೇ ಕಳೆಯುವ ಹಂತಕ್ಕೆ ಹೋಗಿರುವ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಕಣ್ಣಲ್ಲಿ ರಕ್ತ ಸುರಿಯುತ್ತಿದ್ದಂತೆ ಪೊಲೀಸ್ ಹೊನ್ನಪ್ಪ ಬೇಡವೆಂದರೂ ಕಿಸೆಯಲ್ಲಿಟ್ಟು ತೋರಿಸಿಕೋ ಎಂದು ಕಳಿಸಿಕೊಟ್ಟಿದ್ದು ಬಹಿರಂಗವಾಗಿದೆ.
ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿರುವ ಠಾಣೆಯ ಪೊಲೀಸ್ ಹೊನ್ನಪ್ಪ, ಕಣ್ಣು ಕಳೆದುಕೊಳ್ಳುವ ಆತಂಕದಲ್ಲಿರುವ ಯುವಕನ ಕಿಸೆಯಲ್ಲಿ ಎರಡು ಸಾವಿರ ರೂಪಾಯಿ ಇಟ್ಟಿದ್ದನ್ನ ನೊಂದ ರಾಜು (ಹೆಸರು ಬದಲಾವಣೆ ಮಾಡಲಾಗಿದೆ) ಹೇಳಿಕೊಂಡಿದ್ದಾನೆ.
ಮಟಕಾ ಬರೆದುಕೊಳ್ಳುತ್ತಿ ಎಂದು ಮನೆಯಲ್ಲಿ ಮಲಗಿದವನನ್ನ ಕರೆದುಕೊಂಡು ಬಂದು 161 ಮಾಡಲು ಮುಂದಾಗಿದ್ದರು ಎಂದು ಹೇಳಲಾಗಿದೆ. 161 ಮಾಡುವ ಮೊದಲು ಬೆದರಿಸುವುದಕ್ಕೆ ಮುಂದಾದ ಸಮಯದಲ್ಲೇ ಕಣ್ಣಿಗೆ ಬಡಿಗೆಯಿಂದ ಹೊಡೆದಿದ್ದು ಯಾರೂ ಎಂಬುದು ಕೂಡಾ ಬಹಿರಂಗವಾಗಲಿದೆ.
ಮೂವರು ಪೊಲೀಸರ ಓರ್ವ ಯುವಕನ ಜೀವನದ ಬೆಳಕನ್ನೇ ಕಳೆಯುವ ಹಂತಕ್ಕೆ ಹೋಗಿದ್ದು, ಪೊಲೀಸ್ ಇಲಾಖೆಯ ಕೆಲವರಿಗೆ ಜಿಗುಪ್ಸೆ ಹುಟ್ಟಿದೆ. ಇಂತವರಿಂದಲೇ ನಮ್ಮ ಇಲಾಖೆಯ ಗೌರವ ಹಾಳಾಗುತ್ತಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇದೇಲ್ಲದ ನಡುವೆ ಪ್ರಕರಣ ಬೆಳಕಿಗೆ ಬಂದ ನಂತರವೂ ಸಮಾಜದ ಮುಖಂಡರ ನಡುವೆ 70 ಸಾವಿರಕ್ಕೆ ವ್ಯವಹಾರ ಕುದುರಿಸುವ ಪ್ರಯತ್ನವೂ ನಡೆದಿರುವುದು ರಹಸ್ಯವಾಗಿ ಉಳಿದಿಲ್ಲ. ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕನ ಸ್ಥಿತಿ ಮಾತ್ರ ಅಯೋಮಯವಾಗಿದೆ.
ಪೊಲೀಸ್ ಹೊನ್ನಪ್ಪ ಸೇರಿದಂತೆ ಇನ್ನಿಬ್ಬರು ಪೊಲೀಸರು ಯಾರೂ ಎಂಬುದು ಕೂಡಾ ಬಹಿರಂಗವಾಗಿ ಆ ಹುಡುಗನಿಗೆ ಕಣ್ಣು ಸರಿಯಾಗಬೇಕಿದೆ. 161 ಹಪಾಹಪಿಯಲ್ಲಿರುವ ಕೆಲವು ಪೊಲೀಸರ ಗುಣ ನೂತನವಾಗಿ ಬಂದಿರುವ ಪೊಲೀಸ್ ಕಮೀಷನರ್ ಅವರಿಗೆ ಗೊತ್ತಾಗಬೇಕಿದೆ.