ಕಳ್ಳಬೆಕ್ಕಿನ ಕಳ್ಳಾಟ: ಮೀಸೆಗೆ ಕೆನೆ ಹತ್ತಬಾರದೆಂದು ಮೀಸೆ ಸಣ್ಣ ಮಾಡಿಸಿಕೊಂಡ ಅಧಿಕಾರಿ- ನಡೆಯುತ್ತಿದೆ ‘ಓಓಡಿ’ ದಂಧೆ
1 min read
ಹುಬ್ಬಳ್ಳಿ: ಅವಳಿನಗರದಲ್ಲಿ ಹಿರಿಯ ಅಧಿಕಾರಿಯೋರ್ವರು ಕದ್ದು ಮುಚ್ಚಿ ಹಾಲು ಕುಡಿದು ಕೆನೆಯನ್ನ ಮೀಸೆಗೆ ಹತ್ತದಂತೆ ಜಾಗೃತೆ ವಹಿಸುತ್ತ ಮುಂದೆ ಸಾಗುತ್ತಿರುವ ಪ್ರಕರಣಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಅನಾರೋಗ್ಯದಿಂದ ರಜೆಯಲ್ಲಿದ್ದಾಗ ಹಲವರನ್ನ ಓಓಡಿ ಮೂಲಕ ರಸ್ತೆಗೆ ಬಿಡಲಾಗಿದೆಯಂತೆ.
ಹಾಗೇ ನೋಡಿದರೇ, ಠಾಣೆಗೊಂದು ಓಓಡಿ ಪ್ರಕರಣಗಳು ಪತ್ತೆಯಾಗುತ್ತವೆ. ಧಾರವಾಡದ ಠಾಣೆಯಿಂದ ಹುಬ್ಬಳ್ಳಿಯ ಕಚೇರಿಗೆ ಓಓಡಿ ಮಾಡಿಸಿಕೊಂಡು, ಎರಡು ವಾಹನದ ಜವಾಬ್ದಾರಿ ಪಡೆದು ಪ್ರತಿ ದಿನವೂ ಮೂರು, ಮೂರುವರೆ ಸಾವಿರ ಒಂದೊಂದು ವಾಹನದಿಂದ ‘ಕಳ್ಳ ಬೆಕ್ಕು’ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.
ದಕ್ಷ ಅಧಿಕಾರಿಯಾಗಿರುವ ಪೊಲೀಸ್ ಕಮೀಷನರ್ ಅವರೊಮ್ಮೆ ಓಓಡಿ ಮಾಡಿಕೊಂಡಿರುವವರ ಲಿಸ್ಟ್ ಪಡೆದರೇ ಸಾಕು. ಕಳ್ಳು ಬೆಕ್ಕು ಎಷ್ಟು ಹಾಲು ಕುಡಿತು, ಕೆನೆಯನ್ನ ಯಾವಾಗ ಒರೆಸಿಕೊಂಡರು ಎಂಬುದು ಗೊತ್ತಾಗತ್ತೆ ಎನ್ನುವುದು ಪೊಲೀಸರ ಬಗ್ಗೆ ಹಾಗೂ ಜನರ ಬಗ್ಗೆ ಕಾಳಜಿಯಿರೋದು ಹೇಳುತ್ತಿದ್ದಾರೆ. ಅದನ್ನ ಕಮೀಷನರ್ ಮಾಡುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.