ನೀರಸಾಗರದಲ್ಲಿ ನೀರುಪಾಲಾಗಿದ್ದ ಆಟೋ ಚಾಲಕ ಶವವಾಗಿ ಪತ್ತೆ.. ಕುಟುಂಬಸ್ಥರ ಆಕ್ರಂದನ…
1 min read
ಕಲಘಟಗಿ: ತಾಲೂಕಿನ ನೀರಸಾಗರ ಕೆರೆಯಲ್ಲಿ ಗೆಳೆಯರೊಂದಿಗೆ ಈಜಲು ಬಂದಿದ್ದ ಆಟೋ ಚಾಲಕನೋರ್ವ ನೀರಿನಲ್ಲಿ ಮುಳುಗಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ.

ಹುಬ್ಬಳ್ಳಿಯ ಆನಂದನಗರದ ನಿವಾಸಿಯಾಗಿದ್ದ ಪೃಥ್ವಿ ರವಿವಾರ ತನ್ನ ಗೆಳೆಯರೊಂದಿಗೆ ಈಜಲು ಹೋದ ಸಮಯದಲ್ಲಿ ಕೋಡಿಯ ನೀರಿನಲ್ಲಿ ಮುಳುಗಿದ್ದ. ತಕ್ಷಣವೇ ಕಾರ್ಯಾಚರಣೆ ಆರಂಭಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ನಿರಂತರವಾಗಿ ನಡೆದ ಕಾರ್ಯಾಚರಣೆಯಲ್ಲಿ ಪೃಥ್ವಿ ಶವವಾಗಿ ಸಿಕ್ಕಿದ್ದು, ನೀರಸಾಗರದ ಕೆರೆಯ ದಂಡೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.