ನವಲಗುಂದದಲ್ಲಿ ಜಯ ಕರ್ನಾಟಕ ಸಂಘಟನೆ ಮಾಡಿದ್ದೇನು..!
1 min read
ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಜಯ ಕರ್ನಾಟಕ ಸಂಘಟನೆ ಕನ್ನಡ ರಾಜ್ಯೋತ್ಸವವನ್ನ ಸಡಗರದಿಂದ ವಿಭಿನ್ನವಾಗಿ ಆಚರಣೆ ಮಾಡಲಾಯಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನವಲಗುಂದ ನಗರದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಗಣಪತಿಯ ದೇವಸ್ಥಾನದಲ್ಲಿ ಕನ್ನಡಾಂಭೆಯ ಭಾವಚಿತ್ರಕ್ಕೆ ಪೂಜೆ ಮಾಡುವದರ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಜಯ ಕರ್ನಾಟಕ ಸಂಘಟನೆ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿಯ ರೋಗಿಗಳಿಗೆ ಹಣ್ಣು ಜೂಸ್ ವಿತರಣೆ ಮಾಡುವ ಮೂಲಕ ಕನ್ನಡಾಂಭೆಗೆ ಸೇವೆ ಸಲ್ಲಿಸಿದ ಮನೋಭಾವನೆ ಬೆಳೆಸಿಕೊಂಡ ಸಂಘಟನೆಯವರು ಸಾರ್ವಜನಿಕರ ಆದರಕ್ಕೆ ಪಾತ್ರರಾದರು.
ನವಲಗುಂದ ನಗರದ PSI ಜಯಪಾಲ ಪಾಟೀಲ್, ವಿತ್ತಲ ಜಮಾದಾರ , ವಿರೇಶ ಬೆಂಡಿಗೇರಿ , ದಾನು ಹಿರೇಮಠ, ಮಾಂತೇಶ ಬಳಗಲಿ, ಗಂಗಾಧರ ಹಿರೆಮಠ, ಬಸವರಾಜ ವೈದ್ಯ, ಮಂಜು ವಡ್ಡರ, ಕಲ್ಲಪ್ಪ ಜಾಡರ, ಶಂಕರ ಇಂಗಳೆ, ಪ್ರದೀಪ ಹೆಬ್ಬಳ್ಳಿ, ಮಾಂತೇಶ ಪಾಟೀಲ್, ಹರೀಶ್ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.