ನಾಗಲಾವಿ ಕೆರೆಯಲ್ಲಿ ಶವವಾಗಿ ಪತ್ತೆಯಾದ “ಧಾರವಾಡದ ವರ”…!!!
1 min read
ಧಾರವಾಡ: ಬರುವ ತಿಂಗಳಲ್ಲಿ ಮದುವೆ ದಿನಾಂಕ ಫಿಕ್ಸ್ ಆಗಿದ್ದ ಯುವಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಾಗಲಾವಿಯಲ್ಲಿ ನಡೆದಿದ್ದು, ಆತನಿಗಾಗಿ ಸುಮಾರು ಐದು ಗಂಟೆ ಹುಡುಕಾಟ ನಡೆದಿತ್ತು.
ಧಾರವಾಡದ ಕಂಠಿಗಲ್ಲಿಯ ಮಲ್ಲಿಕ್ ಎಂಬ ಮೂವತ್ತು ವರ್ಷದ ಯುವಕ ನಾಪತ್ತೆಯಾಗಿದ್ದ. ಈತನ ಮದುವೆ ಜೂನ್ 18 ರಂದು ನಿಗದಿಯಾಗಿತ್ತು. ಆದರೆ, ಇದೇ ಸಮಯದಲ್ಲಿ ಇಂತಹ ಘಟನೆ ನಡೆದಿತ್ತು. ಕುಟುಂಬಸ್ಥರು ಕೆರೆಯ ದಂಡೆಯ ಮೇಲೆ ಕಣ್ಣೀರಿಡುತ್ತ ಕೂತ ಸಮಯದಲ್ಲಿ ಶವ ದೊರಕಿದೆ.
ಯುವಕನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿದ್ದರು. ಸುಮಾರು ಹೊತ್ತಿನ ನಂತರ ಈಗಷ್ಟೇ ವರ ಶವವಾಗಿ ಸಿಕ್ಕಿದ್ದಾನೆ.
ಮಲ್ಲಿಕ್ ಜೊತೆ ಯಾರೂ ಹೋಗಿದ್ದರು ಎಂಬುದರ ಬಗ್ಗೆಯೂ ಯಾವುದೇ ಮಾಹಿತಿ ಲಭಿಸಿಲ್ಲ. ಘಟನೆಯೂ ಹಲವು ರೀತಿಯಲ್ಲಿ ಸಂಶಯ ಮೂಡಿಸಿದೆ.