ಆಸ್ತಿ ಕಬಳಿಕೆ ಮಾಡೋರೆ ನಾನು ಬರುವುದನ್ನ ವಿರೋಧಿಸುತ್ತಿದ್ದಾರೆ- ಶ್ರೀ ದಿಂಗಾಲೇಶ್ವರ ಶ್ರೀಗಳು
1 min read
ಹುಬ್ಬಳ್ಳಿ: ಧಾರ್ಮಿಕ ಕೇಂದ್ರಗಳು ಸಾರ್ವಜನಿಕ ಸೇವೆ ಮಾಡುತ್ತಿದ್ದರೇ ಅದೇ ನನಗೆ ಖುಷಿ. ಈಗ ಮೂರುಸಾವಿರ ಮಠದ ಉತ್ತರಾಧಿಕಾರಿಯಾಗಿ ಮಾತನಾಡುತ್ತಿದ್ದೇನೆ. ಈಗ ಆಸ್ತಿಯನ್ನ ಕಬಳಿಕೆ ಮಾಡೋರೆ ನನ್ನ ವಿರುದ್ಧ ಷಢ್ಯಂತ್ರ ನಡೆಸುತ್ತ ಬಂದಿದ್ದಾರೆಂದು ಮೂರುಸಾವಿರ ಮಠದ ಉತ್ತರಾಧಿಕಾರಿ ಮ.ನಿ.ಪ್ರ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.
ನಾನು ಮೊದಲಿಂದಲೂ ಮೂರುಸಾವಿರ ಮಠದ ಆಸ್ತಿಯನ್ನ ಉಳಿಸಲು ಪ್ರಯತ್ನ ಮಾಡುತ್ತ ಬಂದಿದ್ದೇನೆ. ಈಗೀರುವ ಸ್ವಾಮಿಗಳ ಸೌಮ್ಯತೆಯನ್ನ ಬಳಕೆ ಮಾಡಿಕೊಂಡು ಹೀಗೆ ಮಾಡಲಾಗುತ್ತಿದೆ. ನಾನೂ ಇರೋವರೆಗೂ ಆಸ್ತಿಯನ್ನ ಕಬಳಿಕೆ ಮಾಡೋಕೆ ಬಿಡೋದಿಲ್ಲ ಎಂದು ಹೇಳಿದರು.
ನಾನು ಉತ್ತರಾಧಿಕಾರಿಯಾಗಿಯೇ ಮಠದ ಆಸ್ತಿಯನ್ನ ಉಳಿಸಲು ಬಂದಿದ್ದೇನೆ. ಮೂರುಸಾವಿರ ಮಠಕ್ಕೆ ಆಸ್ತಿಯನ್ನ ಬಿಟ್ಟು ಕೊಟ್ಟು, ಕೆಎಲ್ಇ ಸಂಸ್ಥೆಯವರು ದಾನವನ್ನ ಮಠಕ್ಕೆ ಮಾಡಬೇಕೆಂದು ಶ್ರೀಗಳು ಹೇಳಿದರು.
ಈ ಎಲ್ಲ ವಿಚಾರಗಳು ನನಗೆ ಗೊತ್ತಾಗಿದ್ದರಿಂದಲೇ ನಾನು ಮಠಕ್ಕೆ ಬರದ ಹಾಗೇ ಮಾಡಲಾಗಿದೆ. ಆಸ್ತಿ ಕಬಳಿಕೆ ಮಾಡೋರೆ ಇದನ್ನೇಲ್ಲ ಮಾಡುತ್ತಿರುವುದೆಂದು ಹಲವು ಬಾರಿ ಶ್ರೀಗಳು ಹೇಳಿದರು.