‘ಆಕೆ’ಯನ್ನ ನಿಂದಿಸಿದ್ದಕ್ಕೆ ‘ಈತ’ ನೂಕಿದ: “ಕಾಂಕ್ರೀಟ್ ಸಾವು”
1 min read
ಹುಬ್ಬಳ್ಳಿ: ಕುಡಿದ ನಸೆಯಲ್ಲಿ ಯುವತಿಗೆ ಪದೇ ಪದೇ ನಿಂದನೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನ ರೋಸಿ ಹೊದ ಯುವಕನೋರ್ವ ನೂಕಿದ ಪರಿಣಾಮ, ಕೆಳಗೆ ಬಿದ್ದಾತ ಸಾವಿಗೀಡಾದ ಘಟನೆ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ರೆಹಮಾನಸಾಬ ಎಕಲಾಪುರ ಎಂಬಾತನೇ ಸಾವಿಗೀಡಾಗಿದ್ದು, ಕುಡಿದ ಮತ್ತಿನಲ್ಲಿ ಯುವತಿಗೆ ಅವಾಚ್ಯವಾಗಿ ನಿಂದಿಸುತ್ತಿದ್ದ. ಈ ಕಾರಣದಿಂದ ಹರೀಶ ಎಂಬ ಯುವಕ ಆತನನ್ನ ನೂಕಿದ್ದ. ಇದರಿಂದ ಕೆಳಗಡೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.
ರೆಹಮಾನಸಾಬ್ ಎಕಲಾಪುರ ರಾತ್ರಿ ಸಮಯದಲ್ಲಿ ಕುಡಿದ ಮತ್ತಿನಲ್ಲಿ ಯುವತಿಗೆ ಅವಾಚ್ಯವಾಗಿ ನಿಂದನೆ ಮಾಡುತ್ತಿದ್ದ, ಈ ಸಂದರ್ಭದಲ್ಲಿ ಹರೀಶ ವೈದ್ಯ ಎಂಬ ಯುವಕ ರೆಹಮಾನ್ ಸಾಬ್ ನನ್ನು ದೂಕಿದ್ದಾನೆ. ಆಗ ನಿಯಂತ್ರಣ ತಪ್ಪಿ ಕಾಂಕ್ರೀಟ್ ರಸ್ತೆಯಲ್ಲಿ ತಲೆ ಹಚ್ಚಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ, ಕೂಡಲೇ ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾನೆ.
ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹರೀಶ ವೈದ್ಯನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.