ಅಂಚಟಗೇರಿ ಕೊಲೆ ಪ್ರಕರಣ: ಪ್ರೀತಿ ಕೊಂದ ಕೊಲೆಗಾತಿ, ಜೊತೆಗಾರನಿಗೂ ನ್ಯಾಯಾಂಗ ಬಂಧನ
1 min read
ಹುಬ್ಬಳ್ಳಿ: ಸಾಕಷ್ಟು ಕೌತುಕ ಮೂಡಿಸಿದ್ದ ಕೊಲೆ ಪ್ರಕರಣವನ್ನ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಜಗದೀಶ ಸೊಲ್ಲಾಪುರ ಅಂಚಟಗೇರಿ ಗ್ರಾಮದ ಅಕ್ಷತಾಳನ್ನ ಮದುವೆಯಾಗಿದ್ದ. ಇತ್ತೀಚೆಗೆ ಅಕ್ಷತಾ ತಾಯಿಯಾಗಿದ್ದಳು ಕೂಡಾ. ಅಕ್ಷತಾ ಕೆಲವೇ ವರ್ಷಗಳ ಹಿಂದೆ ತಂದೆಯನ್ನ ಕಳೆದುಕೊಂಡಿದ್ದಳು. ಇದೇ ಅಕ್ಷತಾ ತನ್ನ ಮಗುವಿನ ತಂದೆಯನ್ನ ಇಲ್ಲವಾಗಿಸಿದ್ದಾಳೆ.
ಮದುವೆಗೂ ಮುನ್ನವೇ ಅಂಚಟಗೇರಿ ಗ್ರಾಮದ ಕಾಶಪ್ಪ ಎಂಬಾತನೊಂದಿಗೆ ಅಕ್ಷತಾ ಸಂಪರ್ಕ ಇಟ್ಟುಕೊಂಡಿದ್ದಳು. ಆದರೂ, ಮದುವೆಯಾಗಿ ಒಂದು ಮಗುವಿನ ತಾಯಿಯೂ ಆಗಿದ್ದಳು. ಆದರೆ, ಗಂಡನನ್ನೇ ಮುಗಿಸಿ ಪ್ರಿಯಕರನೊಂದಿಗೆ ಈಗ ಜೈಲು ಪಾಲಾಗಿದ್ದಾಳೆ.
ಅಕ್ಷತಾಳ ಮಗುವೀಗ ತಂದೆಯನ್ನ ಕಳೆದುಕೊಂಡು ತಬ್ಬಲಿಯಾಗುವ ಜೊತೆಗೆ ತಾಯಿಯೂ ಜೈಲು ಪಾಲಾಗಿ ಅನಾಥೆಯಾಗುವ ಸ್ಥಿತಿ ಬಂದಿರುವುದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ. ಇಷ್ಟೇಲ್ಲ ರಾದ್ಧಾಂತಕ್ಕೆ ಕಾರಣವಾದ ಇಬ್ಬರನ್ನೂ ನ್ಯಾಯಾಲಯಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಹಾಜರು ಪಡಿಸಿದಾಗ, ಇಬ್ಬರಿಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.