ಹೊರಟ್ಟಿಯವರು ಹೇಳಿದ ಹಾಗೇ ಅವರೇ ಸಭಾಪತಿ ಆಗ್ತಾರೆ..!
1 min read
ಬೆಂಗಳೂರು: ವಿಧಾನಪರಿಷತ್ ನಲ್ಲಿ ಭಾರತೀಯ ಜನತಾ ಪಕ್ಷವೂ ಸಭಾಪತಿ ಸ್ಥಾನವನ್ನ ಜಾತ್ಯಾತೀತ ಜನತಾದಳಕ್ಕೆ ಬಿಟ್ಟು ಕೊಡಲು ಮುಂದಾಗಿದ್ದು, ಈಗಾಗಲೇ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಹೇಳಿದಂತೆ, ನಾಳೆ ಅವರೇ ಸಭಾಪತಿಯಾಗುವುದು ನಿಶ್ಚಿತವಾಗಿದೆ.
ಬಿಜೆಪಿಗೆ ವಿಧಾನಪರಿಷತ್ ನಲ್ಲಿ ಬಹುಮತವಿಲ್ಲ. ಬಿಜೆಪಿಗೆ ಜೆಡಿಎಸ್ ಬೆಂಬಲ ಅನಿವಾರ್ಯ. ಹಾಗಾಗಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದು, ಜೆಡಿಎಸ್ ನ ಬಸವರಾಜ ಹೊರಟ್ಟಿ ಸಭಾಪತಿ, ಬಿಜೆಪಿಯ ಎಂ.ಕೆ.ಪ್ರಾಣೇಶ ಉಪಸಭಾಪತಿಯಾಗಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಮಾತನಾಡಿದ್ದ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು, ಬಹುತೇಕ ನಾನೇ ಸಭಾಪತಿಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಈಗ ಅಂತಹದೇ ಸ್ಥಿತಿ ನಿರ್ಮಾಣವಾಗಿದ್ದು, ನಾಳೆಗೆ ಅವರೇ ಸಭಾಪತಿಯಾಗುವುದು ನಿಶ್ವಿತವಾಗಿದೆ.