ರಸ್ತೆಯಲ್ಲೇ ನಿಂಬಣ್ಣನವರ “ಮಾಸ್ತರ”ಗೆ ಪಾಠ ಮಾಡಿದ ವಿದ್ಯಾರ್ಥಿಗಳು..!
1 min read
ಧಾರವಾಡ: ಏ.. ಸುಮ್ನ ಕುಂಡರೋ.. ನನ್ನ ನೀವೂ ಲೀಡರ್ ಅಂತ್ ಒಪ್ಪಿಕೊಂಡೀರಿ. ಹಂಗಾರ ನನ್ನ ಮಾತ್ ಕೇಳ್ರೀ. ನಿಮ್ಮ ಮೂರ್ ಬೇಡಿಕೆ ಅದಾವ್, ಅವನ್ ಬಗೀಹರಿಸಿ ಕೊಡೋ ಜವಾಬ್ದಾರಿ ನಂದು… ಎಂದು ಇವರಿನ್ನೂ ಮಾತಾಡ್ತಾಯಿರ್ತಾರೆ.. ಅಷ್ಟರಲ್ಲೇ ಆ ಕಡೆಯಿಂದ.. ಯಾವಾಗ, ಯಾವಾಗ ಎಂದು ಪ್ರಶ್ನೆ ಮೂಡತ್ತೆ. ಮಾಸ್ತರ್ ಮರಳಿ ಮಾತಾಡದೇ ಹೊರಟು ಬಿಡ್ತಾರ್.. ಹೌದುರೀ.. ಏನ್ರೀಪಾ ಇದ್ ಅಂತೀರೇನ್.. ಮೊದಲು ಇಲ್ಲಿನ್ ವೀಡಿಯೋ ಪೂರ್ತಿ ನೋಡ್ರೀ.. ಪೂರ್ತಿ ನೋಡ್ರ್ಯಾ ಮತ್ತ್.. ಅರ್ಧಾ ನೋಡಿದ್ರ್.. ಅರ್ಧಾನ್ ತಿಳಿತೈತಿ..
ಕಲಘಟಗಿ ತಾಲೂಕಿನ ಜೋಡಳ್ಳಿ ಗ್ರಾಮದ ಶ್ರೀ ಸಂಗಮೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು, ರಸ್ತೆ ಬಂದ್ ಮಾಡಿ ಹೋರಾಟ ನಡೆಸಿದ್ದರು. ಅದಕ್ಕೆ ಕಾರಣವಾಗಿದ್ದು ಪ್ರೌಢಶಾಲೆಯ ಆಡಳಿತ ಮಂಡಳಿಗೆ ನೀಡಿದ್ದ ವೇತನಾನುದಾನವನ್ನ ಸರಕಾರ ಹಿಂದೆ ಪಡೆದಿದೆ. ಅಷ್ಟೇ ಅಲ್ಲ, ಇಲ್ಲಿದ್ದ ಶಿಕ್ಷಕರನ್ನ ಬೇರೆ ಕಡೆ ವರ್ಗಾವಣೆ ಮಾಡಿದ್ದಾರೆ. ಇದನ್ನ ಖಂಡಿಸಿ ಬೀದಿಗಿಳಿದಾಗ ಶಾಸಕ ಸಿ.ಎಂ.ನಿಂಬಣ್ಣನವರ ಅಲ್ಲಿಗೆ ಬಂದಾಗ ವಿದ್ಯಾರ್ಥಿಗಳೇ ಪಾಠ ಮಾಡುವಂತಾಯಿತು.
ಕೊನೆ ಕೊನೆಗಂತೂ ಶಾಸಕರು ಯಾವುದೇ ಉತ್ತರ ಕೊಡದೇ ಹೊರಟು ನಿಂತಾಗ ಹೋರಾಟಕ್ಕೀಳಿದವರು ಹೇಳಿದ ಮಾತು, ನಿಜಸ್ವರೂಪವನ್ನ ತಿಳಿಸುವಂತಿತ್ತು.
ವಿದ್ಯಾರ್ಥಿಗಳ ಸಮಸ್ಯೆಗೆ ಶಾಸಕರು ಎಷ್ಟು ಸ್ಪಂದನೆ ನೀಡಿದರೂ ಎಂದು ನೋಡುವುದಕ್ಕಿಂತ ವಿದ್ಯಾರ್ಥಿಗಳಿಂದ ಶಾಸಕರು ಎಷ್ಟು ಪಾಠ ಕಲಿತರು ಎನ್ನುವುದನ್ನ ತೋರಿಸುವಂತಿತ್ತು ಘಟನೆ.