ಹುಬ್ಬಳ್ಳಿ-ಧಾರವಾಡದ ಕೆಲ ಸಿವಿಲ್ ಪೊಲೀಸರ ಬಣ್ಣ ಬಯಲು ಮಾಡಿದ ಶಾಸಕ ಅಬ್ಬಯ್ಯ…
1 min read
ಹುಬ್ಬಳ್ಳಿ: ಅವಳಿನಗರದ ಕೆಲವು ಪೊಲೀಸ್ ಠಾಣೆಗಳಲ್ಲಿ ಅವ್ಯವಹಾರ ನಶಿಸಿ ಹೋಗದಿರುವುದಕ್ಕೆ ಪೊಲೀಸರೇ ಕಾರಣವಾಗಿದ್ದಾರೆಂದು ಶಾಸಕ ಪ್ರಸಾದ ಅಬ್ಬಯ್ಯ, ಸಿಎಂ ಹಾಗೂ ಗೃಹ ಸಚಿವರ ಮುಂದೆ ಸ್ಥಳೀಯ ಪೊಲೀಸರ ಬಣ್ಣ ಬಯಲು ಮಾಡಿದರು.
ನಗರದ ಕೆಲವು ಪ್ರದೇಶಗಳಲ್ಲಿ ಹಿರಿಯ ಅಧಿಕಾರಿಗಳು ಹೇಳಿದ ತಕ್ಷಣವೇ, ದಂಧೆ ನಡೆಸುವವರಿಗೆ ಪೊಲೀಸರೇ ಮಾಹಿತಿ ನೀಡುತ್ತಾರೆಂದು ನೇರವಾಗಿ ಆರೋಪಿಸಿದ ಶಾಸಕ ಪ್ರಸಾದ ಅಬ್ಬಯ್ಯ, ಪೂರ್ಣವಾಗಿ ಹೇಳಿದ್ದು ಇಲ್ಲಿದೆ ನೋಡಿ..
ಹುಬ್ಬಳ್ಳಿ ಧಾರವಾಡದಿಂದ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು. ಕೆಲವರು ಇಪ್ಪತ್ತು ವರ್ಷದಿಂದ ಇಲ್ಲಿಯೇ ಬೇರು ಬಿಟ್ಟಿದ್ದಾರೆಂದು ಶಾಸಕರು ಹೇಳಿದರು.