ಒಂದೇ ವೇದಿಕೆಯಲ್ಲಿ ಹಾಲಿ-ಮಾಜಿ ಶಾಸಕರು..!
1 min read
ಕನಕದಾಸರ ಜಯಂತಿಯಲ್ಲಿ ಈಶ್ವರ ಕಾಳಪ್ಪನವರ ಸೇರಿದಂತೆ ಹಲವರನ್ನ ಹಾಲಿ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹಾಗೂ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಸತ್ಕರಿಸಿದರು
ಧಾರವಾಡ: ನಾವೂ ಯಾವುದೇ ಆಚರಣೆ ಮಾಡುವ ಮುನ್ನ ಆಚರಣೆಗೆ ಮನಸ್ಸನ್ನ ವಿಹಲ್ವಗೊಳಿಸುವುದು ಮುಖ್ಯ. ಆಗಲೇ ಆಚರಣೆಗೆ ಅರ್ಥ ಬರುವುದು ಎಂದು ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.
ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ನಡೆದ ದಾಸ ಶ್ರೇಷ್ಠ ಕನಕದಾಸರ 533ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಾಸಕರು ಮಾತನಾಡುತ್ತಿದ್ದರು. ಕನಕದಾಸರ ಪ್ರತಿಯೊಂದು ಕೀರ್ತನೆಗಳಲ್ಲಿಯೂ ಮಾನವೀಯತೆಯ ಲಕ್ಷಣಗಳು ಎದ್ದು ಕಾಣುತ್ತವೆ. ಅವುಗಳನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕೆಂದು ಕೋರಿದರು.
ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿ, ಸಹಬಾಳ್ವೆ ನೀತಿಯನ್ನ ಕನಕದಾಸ ಆಸೆಯಾಗಿತ್ತು. ಅದನ್ನ ನಡೆಸಿಕೊಂಡು ಹೋಗುವುದು ನಮ್ಮ ನಿಮ್ಮೇಲ್ಲರ ನಡೆಯಾಗಬೇಕೆಂದು ಹೇಳಿದರು. ಇದೇ ಸಮಯದಲ್ಲಿ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರು ಶಾಸಕರ ಅನುದಾನದಲ್ಲಿ ಕರಿಶಿದ್ದೇಶ್ವರ ಸಮುದಾಯ ಭವನಕ್ಕಾಗಿ ಐದು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ, ರಾಜ್ಯ ರೈತ ಮೋರ್ಚಾದ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಶಿವಯೋಗಿ ಸುರಕೋಡ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.