ಹೊರಟ್ಟಿ ಚುನಾವಣೆಯ ಚಾಣಕ್ಯ: ನಾತು ಸರ್ ಇನ್ನಿಲ್ಲ
1 min read
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷರು ಹಾಗೂ ಕರ್ನಾಟಕ ಬ್ರಾಹ್ಮಣ ಕ್ಷೇಮಾಭಿವೃದ್ಧಿ ನಿಗಮದ ಸದಸ್ಯರೂ ಆಗಿದ್ದ ಎಂ.ಬಿ.ನಾತು ಅವರು ಅನಾರೋಗ್ಯದಿಂದ ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ರಾಜಕೀಯ ಎಂಟ್ರಿಗೆ ಕಾರಣವಾಗಿ, ನಂತರ ಅವರ ಪ್ರತಿ ಗೆಲುವಿನಲ್ಲಿ ತಮ್ಮದೇ ಆದ ತಂತ್ರಗಾರಿಕೆಯ ಮೂಲಕ ಚುನಾವಣೆಯನ್ನ ಗೆಲುತ್ತಲೆ ಬಂದು ಶಿಕ್ಷಕರ ಒಡನಾಡಿಯಾಗಿದ್ದ ನಾತು ಸರ್ ಇನ್ನಿಲ್ಲವಾಗಿರುವುದು ದುಃಖಕರ ವಿಷಯವಾಗಿದೆ.
ಹುಬ್ಬಳ್ಳಿಯ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈಶ್ವರ ದೇವಸ್ಥಾನದ ಪ್ರಮುಖ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದ ನಾತು ಅವರು, ಜನಪರ ಕಾಳಜಿಯೊಂದಿಗೆ ಪ್ರತಿಯೊಬ್ಬರ ಜೊತೆಯೂ ಆತ್ಮೀಯತೆ ಹೊಂದಿದ್ದರು.
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆ, ನ್ಯೂ ಇಂಗ್ಲೀಷ ಗರ್ಲ್ಸ ಸ್ಕೂಲ್ ನಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ತಮ್ಮ ಅಮೂಲ್ಯವಾದ ಸೇವೆ ನೀಡಿ, ಶಾಲೆಗಳ ಅಭಿವೃದ್ಧಿಗಾಗಿ ಪ್ರಮುಖ ಪಾತ್ರ ವಹಿಸಿದ್ದು, ಹುಬ್ಬಳ್ಳಿಯ ಜನರಲ್ಲಿ ಅಚ್ಚಳಿಯದೇ ಉಳಿದಿದೆ.
ಇವರ ಇಬ್ಬರು ಪುತ್ರರ ಪೈಕಿ ಓರ್ವ ಸುವರ್ಣ ನ್ಯೂಸ್ ಚಾನಲ್ಲನಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂ.ಬಿ.ನಾತು ಅವರ ಅಂತ್ಯಕ್ರಿಯೆ ವಿದ್ಯಾನಗರದ ರುದ್ರಭೂಮಿಯಲ್ಲಿ ರಾತ್ರಿ 9.30ಕ್ಕೆ ನೆರೆವೇರಲಿದೆ.