ಧಾರವಾಡದ ಮರಾಠಾ ಕಾಲನಿಯಲ್ಲಿ ಹತ್ತಿ ತುಂಬಿದ ಟ್ರ್ಯಾಕ್ಟರ್ ಪಲ್ಟಿ: ರೈತರಿಬ್ಬರು ಪಾರು
1 min read
ಧಾರವಾಡ: ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಿಂದ ಧಾರವಾಡ ತಾಲೂಕಿನ ನರೇಂದ್ರ ಬಳಿಯಿರುವ ಹತ್ತಿ ಜಿನ್ನಿಂಗ್ ಪ್ಯಾಕ್ಟರಿಗೆ ತರುತ್ತಿದ್ದ ಹತ್ತಿಯ ಟ್ರ್ಯಾಕ್ಟರ್ ಮರಾಠಾ ಕಾಲನಿಯ ಗಣೇಶ ದೇವಸ್ಥಾನದ ಬಳಿ ಸಂಭವಿಸಿದ್ದು, ರೈತರಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹತ್ತಿಯ ಬೆಲೆ ಜಿನ್ನಿಂಗ್ ಪ್ಯಾಕ್ಟರಿಯಲ್ಲಿ ಹೆಚ್ಚು ಸಿಗುತ್ತದೆ ಎಂದುಕೊಂಡು ಸವದತ್ತಿಯಿಂದ ಟ್ರ್ಯಾಕ್ಟರಿನಲ್ಲಿ ಹತ್ತಕ್ಕೂ ಹೆಚ್ಚು ಅಂಡಿಗೆಗಳನ್ನ ಹೇರಿಕೊಂಡು ನರೇಂದ್ರದ ಬಳಿಯಿರುವ ಜಿನ್ನಿಂಗ್ ಪ್ಯಾಕ್ಟರಿಗೆ ಬರುತ್ತಿದ್ದಾಗ ದುರ್ಘಟನೆ ನಡೆದಿದೆ.
ಧಾರವಾಡದ ಮರಾಠಾ ಕಾಲನಿಯ ದೇವಸ್ಥಾನದ ಬಳಿ ರಸ್ತೆ ಚೂರು ಏರಿಕೆಯಿದ್ದ ಪರಿಣಾಮ ಟ್ರ್ಯಾಕ್ಟರ್ ಟೇಲರ್ ಪಲ್ಟಿಯಾಗಿದೆ. ತಕ್ಷಣವೇ ಎಂಜಿನದಲ್ಲಿ ಕುಳಿತಿದ್ದ ಸಂಗಪ್ಪ ಹಾಗೂ ದೇವರಾಜು ಜಿಗಿದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆ ಪೊಲೀಸರು ಆಗಮಿಸಿದ್ದು, ರಸ್ತೆ ಸಂಚಾರವನ್ನ ಸುಗಮಗೊಳಿಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.