ಮಲ್ಲಿಗವಾಡ ಕ್ರಾಸ್ ಬಳಿ ಕಾರು ಬೈಕ್ ಡಿಕ್ಕಿ ಇಬ್ಬರಿಗೆ ಗಂಭೀರ ಗಾಯ
1 min read
ಧಾರವಾಡ: ವೇಗವಾಗಿ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಸಮೀಪದ ಮಲ್ಲಿಗವಾಡ ಕ್ರಾಸ್ ಬಳಿ ಸಂಭವಿಸಿದೆ.
ಬೈಕಿನಲ್ಲಿ ಹೋಗುತ್ತಿದ್ದ ಕಿರಣ ಪರಶುರಾಮ ಕಾಳೆ ಹಾಗೂ ಶಿವಪ್ಪ ಬಸಪ್ಪ ತಳವಾರ ಎಂಬುವವರಿಗೆ ತೀವ್ರವಾದ ಗಾಯಗಳಾಗಿದ್ದು, ಇಬ್ಬರನ್ನೂ ಧಾರವಾಡದ ಸಿವಿಲ್ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆ ನೀಡಲಾಗುತ್ತಿದೆ.
ವೇಗವಾಗಿ ಕಾರು ಹೋಗುತ್ತಿದ್ದಾಗ ಹಿಂಬಂದಿಯಿಂದ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕನ ಕಾಲು ಸಂಪೂರ್ಣ ಮುರಿದಿದ್ದು, ಕೈ ಕೂಡಾ ಮುರಿದಿದೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಬೈಕ್ ಚಲಾಯಿಸುತ್ತಿದ್ದವನಿಂದಲೇ ತಪ್ಪು ಆಗಿದೆಯಂದು ಹೇಳಲಾಗುತ್ತಿದ್ದು, ಕಾರನ್ನ ಓವರ್ ಟೇಕ್ ಮಾಡುತ್ತೇನೆ ಎನ್ನುತ್ತಲೇ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಿಂದ ಇಬ್ಬರು ರಸ್ತೆಯಲ್ಲಿ ಬಿದ್ದಿದ್ದಾರೆ. ಬೈಕ್ ಸುಮಾರು 20 ಅಡಿ ದೂರಕ್ಕೆ ಹೋಗಿದೆ.