ಹುಬ್ಬಳ್ಳಿ ಅಕ್ರಮ ಮರಳು ಸಾಗಾಟ: ಸಿಕ್ಕ ಮೂರು ಪ್ರಮುಖರ ಲಾರಿಗಳು
1 min read
ಹುಬ್ಬಳ್ಳಿ: ನಿಗದಿತ ಮರಳನ್ನ ಹಾಕಿಕೊಂಡು ಬರದೇ ಹೆಚ್ಚಿನ ಮರಳನ್ನ ಹಾಕಿಕೊಂಡು ಬಂದು ಮಾರಾಟ ಮಾಡಲು ಯತ್ನಿಸಿದ ಮೂರು ಲಾರಿಗಳನ್ನ ಹಿಡಿದು ಪ್ರಕರಣ ದಾಖಲು ಮಾಡಿರುವ ಘಟನೆ ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಯಲ್ಲಿ ನಡೆದಿದೆ.
ಮುಂಡರಗಿ ಮತ್ತು ನರಗುಂದ ಕಡೆಯಿಂದ ಬರುತ್ತಿದ್ದ ಸಂತೋಷಕುಮಾರ ಮಸ್ತಿ ಮಾಲಿಕತ್ವದ ಕೆಎ25-ಎಎ7823, ದೇವಾನಂದ ಚೌಧರಿ ಮಾಲಿಕತ್ವದ ಕೆಎ26-ಎ8935 ಹಾಗೂ ಅನಿಲ ಬಾಲರೆಡ್ಡಿ ಎಂಬಾತರಿಗೆ ಸೇರಿದ ಕೆಎ26-ಎ5742 ಲಾರಿಗಳನ್ನ ಹಿಡಿದಿರುವ ಸಂಚಾರಿ ಠಾಣೆ ಪೊಲೀಸರು, ಪ್ರಕರಣ ದಾಖಲು ಮಾಡಿದ್ದಾರೆ.
ಆರು ಗಾಲಿನ ಲಾರಿಯಲ್ಲಿ ನಿಗದಿತ ಟನ್ ಮಾತ್ರ ಮರಳು ಸಾಗಾಟಕ್ಕೆ ಅವಕಾಶವಿದೆ. ಆದರೆ, ನಿರಂತರವಾಗಿ ಹೆಚ್ಚು ಮರಳನ್ನ ಹಾಕಿಕೊಂಡು ಬಂದು ಮಾರಾಟ ಮಾಡುತ್ತಿದ್ದಾರೆಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಕುರಿತಂತೆ ಮೋಟಾರ್ ವೆಹಿಕಲ್ ಕಾನೂನಿನಲ್ಲಿ ಪ್ರಕರಣ ದಾಖಲು ಮಾಡಿಕೊಂಡು, ಮುಂದಿನ ಪ್ರಕ್ರಿಯೆಯನ್ನ ಸಂಚಾರಿ ಠಾಣೆಯ ಪೊಲೀಸರು ನಡೆಸುತ್ತಿದ್ದಾರೆ.