ಹುಬ್ಬಳ್ಳಿ ಚೆನ್ನಮ್ಮ ವೃತ್ತದಲ್ಲಿ ಉರುಳಿದ ’10 ಗಾಲಿ ಲಾರಿ’- ಅಲ್ಲೇನಾಗಿದೆ ಗೊತ್ತಾ..!
1 min read
ಹುಬ್ಬಳ್ಳಿ: ಹರಿಯಾಣದಿಂದ ಹುಬ್ಬಳ್ಳಿಯ ತಾರಿಹಾಳ ಇಂಡಸ್ಟೀಯಲ್ ಪ್ರದೇಶಕ್ಕೆ ಹೊರಟಿದ್ದ ಮಾಲು ತುಂಬಿದ್ದ ಲಾರಿಯೊಂದು ಬೆಳಗಿನ ಜಾವ ಕಿತ್ತೂರು ಚೆನ್ನಮ್ಮ ವೃತ್ತದಲ್ಲೇ ಪಲ್ಟಿಯಾದ ಘಟನೆ ನಡೆದಿದೆ.
ಹರಿಯಾಣದಿಂದ ಬೆಳ್ಳುಳ್ಳಿ ಹಾಗೂ ಹಲ್ಲುಜ್ಜುವ ಪೇಸ್ಟನ್ನ ತೆಗೆದುಕೊಂಡು ಬಂದಿದ್ದ ಲಾರಿಯು ಚಾಲಕನ ಅಜಾಗೂರತೆಯಿಂದ ಪಲ್ಟಿಯಾಗಿದೆ. ಚಾಲಕ ಸಾಹುಲ ಖಾನ ಹಾಗೂ ಕ್ಲೀನರ್ ಮೊಹ್ಮದ ಸಯೀಫ ತಕ್ಷಣವೇ ಲಾರಿಯಿಂದ ಜಿಗಿದು ಪ್ರಾಣವನ್ನ ಉಳಿಸಿಕೊಂಡಿದ್ದಾರೆ.
ಚೆನ್ನಮ್ಮ ವೃತ್ತದಲ್ಲೇ ಘಟನೆ ನಡೆದಿದ್ದರಿಂದ ಬಿದ್ದ ಲಾರಿಯನ್ನ ಮೇಲೆತ್ತಲು ಹರಸಾಹಸ ನಡೆದಿದೆ. ಎರಡು ಹಿಟ್ಯಾಚಿಗಳನ್ನ ತೆಗೆದುಕೊಂಡು ಬಂದು ಮೇಲೆತ್ತುವ ಪ್ರಯತ್ನ ನಡೆಸಲಾಗುತ್ತಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.
10 ಗಾಲಿಯ ಈ ಲಾರಿಯು ಚೆನ್ನಮ್ಮ ವೃತ್ತದಲ್ಲಿ ಬೀಳಲು ಚಾಲಕ ರಾಂಗ್ ರೂಟಲ್ಲಿ ಬಂದಿದ್ದಾನೆಂದು ಹೇಳಲಾಗಿದೆ. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿಯನ್ನ ಮೇಲೆತ್ತಲು ಪೊಲೀಸರು ಶತಪ್ರಯತ್ನ ನಡೆಸಿದ್ದಾರೆ.