ನವನಗರ ಎಪಿಎಂಸಿ ಠಾಣೆ “353” ಕೇಸ್: ಬಂಧಿತ ವಕೀಲ ಸೇರಿ ಮೂವರಿಗೂ ಜಾಮೀನು
1 min read
ಹುಬ್ಬಳ್ಳಿ: ಅವಳಿನಗರದಲ್ಲಿ ತೀವ್ರ ಸದ್ದು ಮಾಡುತ್ತಿರುವ ನವನಗರ ಎಪಿಎಂಸಿ ಠಾಣೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ವಕೀಲ, ರೌಡಿ ಷೀಟರ್ ಹಾಗೂ ರಾಜಕಾರಣಿಯೋರ್ವರಿಗೆ ಜಾಮೀನು ದೊರೆತಿದ್ದು, ಮೂವರು ಕೂಡಾ ಎಂದಿನಂತೆ ಜೀವನ ನಡೆಸುತ್ತಿದ್ದಾರೆ.
ನವನಗರದ ನಿವಾಸಿಯೂ ಆಗಿರುವ ವಕೀಲರ ಸಂಘದ ಸದಸ್ಯ ವಿನೋದ ಪಾಟೀಲ, ರೌಡಿ ಷೀಟರ್ ಪ್ರವೀಣ ಪೂಜಾರಿ ಹಾಗೂ ರಾಜಕಾರಣಿ ಮಲ್ಲಯ್ಯ ಹಿರೇಮಠ ವಿರುದ್ಧ ನವನಗರ ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನ ದಾಖಲು ಮಾಡಿ, ಮೂವರನ್ನ ಬಂಧನ ಮಾಡಿದ್ದರು.
ಈ ಘಟನೆ ಹೊಸ ಸ್ವರೂಪವನ್ನೇ ಪಡೆದು ವಕೀಲ ವಿನೋದ ಪಾಟೀಲ ಪರವಾಗಿ ಈಗಲೂ ಹೋರಾಟ ಮುಂದುವರೆದಿದ್ದು, ಬಂಧನದ ಸಮಯದಲ್ಲಿ ಕೈಕೊಳ ಹಾಕಿರುವುದು ಮತ್ತಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಎಲ್ಲರೂ ಜಾಮೀನಿನ ಮೇಲೆ ಬಂದಿರುವುದು ಹೋರಾಟದ ಸ್ವರೂಪ ಬದಲಾಗುವ ಸಾಧ್ಯತೆಯಿದೆ.
ವಕೀಲ ವಿನೋದ ಪಾಟೀಲರನ್ನ ಬಂಧನ ಮಾಡಿರುವ ಇನ್ಸಪೆಕ್ಟರ್ ಪ್ರಭು ಸೂರಿನ್ ಅಮಾನತ್ತು ಮಾಡುವಂತೆ ಗುರುವಾರದವರೆಗೆ ವಕೀಲರು ಗಡುವು ನೀಡಿರುವುದನ್ನ ಇಲ್ಲಿ ಸ್ಮರಿಸಬಹುದು.