ಮನೆ ಬೀಗ ಹಾಕಿದವರ ಮನೆಯನ್ನೇ ದೋಚಿದರು: ಡಿವೈಎಸ್ಪಿ ರವಿ ನಾಯಕ ಭೇಟಿ ಮಾಡಿದಾಗ ನಡೆದ್ದೇನು..!
1 min read
ಧಾರವಾಡ: ಜಿಲ್ಲೆಯ ಕುಂದಗೋಳ ತಾಲೂಕಿನ ಇನಾಂಕೊಪ್ಪದಲ್ಲಿ ಹಿತ್ತಲ ಬಾಗಿಲಿನಿಂದ ನುಗ್ಗಿ ಲಕ್ಷಾಂತರ ರೂಪಾಯಿ ನಗದು ಸಮೇತ, ಬಂಗಾರ ಬೆಳ್ಳಿಯನ್ನ ದೋಚಿಕೊಂಡು ಪರಾರಿಯಾದ ಘಟನೆ ಮನೆ ಬಾಗಿಲಿನಲ್ಲೇ ಮಲಗಿದವರಿಗೆ ಬೆಳಗಿನ ಜಾವ ಗೊತ್ತಾಗಿದೆ.
ರಾತ್ರಿ ಜಳದ ಧಗೆಯಿಂದ ತಪ್ಪಿಸಿಕೊಳ್ಳಲು ಮನೆಯ ಹಿತ್ತಲ ಬಾಗಿಲಿನ ಕೊಂಡಿ ಹಾಕಿಕೊಂಡು ಮುಂದಿನ ಬಾಗಲಿಗೆ ಕೀಲಿ ಹಾಕಿ ಮಲಗಿದ್ದ ಫಕ್ಕೀರಯ್ಯ ಹಿರೇಮಠ ಎಂಬುವವರ ಮನೆಯನ್ನೇ ದೋಚಲಾಗಿದೆ. ಮನೆಯ ಅಲ್ಮೇರಾದಲ್ಲಿಟ್ಟದ್ದ 1ಲಕ್ಷ 20 ಸಾವಿರ ರೂಪಾಯಿ ನಗದು, 30 ಗ್ರಾಂ ಚಿನ್ನ ಹಾಗೂ 200 ಗ್ರಾಂ ಬೆಳ್ಳಿಯನ್ನ ದೋಚಿಕೊಂಡು ಪರಾರಿಯಾಗಿದ್ದಾರೆ.
ಘಟನೆಯ ಬಗ್ಗೆ ಕುಂದಗೋಳ ಪೊಲೀಸ್ ಠಾಣೆಗೆ ತಿಳಿಸಿದ ನಂತರ ಡಿವೈಎಸ್ಪಿ ರವಿ ನಾಯಕ ಮತ್ತು ಇನ್ಸಪೆಕ್ಟರ್ ಪಕ್ಕೀರಯ್ಯ ಹಿರೇಮಠರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಮಯದಲ್ಲಿ ಮನೆಯಲ್ಲಿ ಹಣ ಇರುವ ಬಗ್ಗೆ ಯಾರಿಗೆ ಗೊತ್ತಿತ್ತು ಎಂಬುದನ್ನ ತಿಳಿದುಕೊಳ್ಳಲಾಗಿದೆ.
ಹಿರೇಮಠ ಅವರಿಗೆ ಪರಿಚಿತರೇ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಹಿತ್ತಲ ಬಾಗಿಲನ್ನ ಒಳಗೆ ನುಗ್ಗಿರುವ ಬಗ್ಗೆ ಪಿಂಗರ್ ಪ್ರಿಂಟ್ ಸೇರಿದಂತೆ ಶ್ವಾನದಳದೊಂದಿಗೆ ತಪಾಸಣೆ ಮಾಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.