ಹುಬ್ಬಳ್ಳಿ: ಬೈಕ್ ತೆಗೆದುಕೊಂಡು ಏಳೇ ದಿನದಲ್ಲಿ ಯುವಕನ ದುರ್ಮರಣ: ಕಣ್ಣೀರಾಗುತ್ತಿರುವ ಕುಟುಂಬ
1 min read
ಹುಬ್ಬಳ್ಳಿ: ಮನೆಯವರನ್ನ ಕಾಡಿ ಬೇಡಿ ಬೈಕ್ ತೆಗೆದುಕೊಂಡಿದ್ದ ಯುವಕ ಏಳೇ ದಿನದಲ್ಲಿ ಅದೇ ಬೈಕಿನಿಂದ ಬಿದ್ದು ಪ್ರಾಣವನ್ನ ಕಳೆದುಕೊಂಡ ಘಟನೆ ಹುಬ್ಬಳ್ಳಿ ತಾಲೂಕಿನ ವರೂರ ಬಳಿ ಸಂಭವಿಸಿದೆ.
ಹಳೇಹುಬ್ಬಳ್ಳಿ ನಿವಾಸಿಯಾಗಿರುವ ಮಲಿಕ್ ಎಂಬ ಯುವಕನೇ ಕಳೆದ ಏಳು ದಿನಗಳ ಹಿಂದೆ ಹೊಸ ಬೈಕ್ ಖರೀದಿಸಿದ್ದ. ಮನೆಯವರು ಈಗಲೇ ಬೈಕ್ ತೆಗೆದುಕೊಳ್ಳುವುದು ಬೇಡವೆಂದು ಸಮಜಾಯಿಸಿ ನೀಡಿದರೂ, ಮಲಿಕ್ ಹಠ ಮಾಡಿ ಬೈಕ್ ಖರೀದಿಸಿದ್ದ.
ಹುಬ್ಬಳ್ಳಿಯಿಂದ ಹೈವೆಯಲ್ಲಿ ವೇಗವಾಗಿ ಬೈಕ್ ಚಲಾಯಿಸಿ ಮಜಾ ತೆಗೆದುಕೊಳ್ಳುತ್ತಿದ್ದ ಯುವಕ, ಬೈಕಿನಿಂದ ಆಯತಪ್ಪಿ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಕಿಮ್ಸಗೆ ರವಾನೆ ಮಾಡಿ, ಚಿಕಿತ್ಸೆಗೆ ಒಳಪಡಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಯುವಕ ಸಾವಿಗೀಡಾಗಿದ್ದಾನೆ.
ಪ್ರಕರಣ ದಾಖಲು ಮಾಡಿಕೊಂಡಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.