ಧಾರವಾಡ ಬಳಿ ಬೈಕುಗಳ ಮುಖಾಮುಖಿ ಡಿಕ್ಕಿ: ರೇಲ್ವೆ ಉದ್ಯೋಗಿ, ವ್ಯಾಪಾರಿ ಸ್ಥಿತಿ..!
1 min read
ಧಾರವಾಡ: ಬೈಕ್ ಹಾಗೂ ಸ್ಕೂಟಿಯ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಸತ್ತೂರ ಬಳಿ ಸಂಭವಿಸಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ವ್ಯಾಪಾರಿಯಾಗಿರುವ ದ್ವಾರಕಾನಗರ ಆಶ್ರಯ ಕಾಲೋನಿ ನಿವಾಸಿ ಜಗನ್ನಾಥ ಮಹಾಬಲ ಶೆಟ್ಟಿ ಹಾಗೂ ಧಾರವಾಡ ಸಂಗೋಳ್ಳಿ ರಾಯಣ್ಣ ನಗರದ ರೇಲ್ವೆ ಉದ್ಯೋಗಿ ರವೀಂದ್ರ ಮಡಿವಾಳಪ್ಪ ಯಲಿಗಾರ ಗಾಯಗೊಂಡಿದ್ದು, ಇಬ್ಬರನ್ನೂ ಧಾರವಾಡದ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಬ್ಬರು ಕೂಡಾ 60ರ ಆಸುಪಾಸಿನವರಾಗಿದ್ದು, ತೀವ್ರ ರಕ್ತಸ್ರಾವವಾಗಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತ್ತೂರ ಕ್ರಾಸ್ ಬಳಿ ಒಬ್ಬರಿಗೋಬ್ಬರು ನೋಡಿಕೊಂಡು ಹೋಗುವ ಬದಲು, ಬೈಕ್ ನ್ನ ತಿರುಗಿಸಿದ್ದರಿಂದ ಘಟನೆ ನಡೆದಿದೆ.
ಪ್ರಕರಣ ಧಾರವಾಡದ ಸಂಚಾರಿ ಠಾಣೆಯಲ್ಲಿ ದಾಖಲಾಗಿದ್ದು, ಇಬ್ಬರು ಬೈಕ್ ಸವಾರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.