ಧಾರವಾಡದಲ್ಲಿ KSGMEWA ಕಾರ್ಯಕ್ರಮ ಯಶಸ್ವಿ..!
1 min read
ಧಾರವಾಡ: ಇಲ್ಲಿಯ ಆಲೂರು ವೆಂಕಟರಾವ್ ಸಭಾಭವನದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಮುಸ್ಲಿಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಧಾರವಾಡ ಜಿಲ್ಲಾ ಘಟಕದ ವತಿಯಿಂದ ಧಾರವಾಡ ಜಿಲ್ಲಾಮಟ್ಟದ ರಾಷ್ಟ್ರೀಯ ಶಿಕ್ಷಣ ನೀತಿ 2020, ಕೋವಿಡ-19 ಸುರಕ್ಷತಾ ಕ್ರಮಗಳು ಹಾಗೂ ವ್ಯಾಕ್ಸಿನೇಷನ್ ಕುರಿತು ಶೈಕ್ಷಣಿಕ ಉಪನ್ಯಾಸ ಕಾರ್ಯಗಾರ , KSGMEWA 2021ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ KSGMEWA ರಾಜ್ಯ ಅಧ್ಯಕ್ಷ ಅಬ್ದುಲ್ ರಹೀಮ್ ಖಾಜಿ ವಹಿಸಿಕೊಂಡಿದ್ದರು. ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಜಯಾನಂದ ಸರಸ್ವತಿ ಮಹಾಸ್ವಾಮಿಗಳು ಹಾಗೂ ಪೀರ ಎ ತರೀಖತ ಹಜರತ್ ಸಯ್ಯದ್ ತಾಜುದ್ದೀನ್ ಎಸ್ ಖಾದ್ರಿ ಅಲ್ ಜೀಲಾನೀ ಕೆಸರ್ಮೊಡವಿ ಸಾಹೇಬ ವಹಿಸಿಕೊಂಡಿದ್ದರು.
ಅರೇಬಿಕ್ ಗುರುಗಳಾದ ಖಾನ್ ಅವರ ಖಿರಾತ್ ನಿಂದ ಈ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಎನ್.ಟಿ.ಮುಲ್ಲಾ ಅವರು ಅಲ್ಲಾಹನ ಸ್ಮರಣೆಯಲ್ಲಿ ಹಮ್ದ ಹೇಳಿದರು. ಸನಾವುಲ್ಲಾಹ ಮಕಾಂದಾರ ಇವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಸ್ಮರಣೆಯಲ್ಲಿ ನಾತ್ ಹೇಳಿದರು. ಹುತಾತ್ಮರ ದಿನದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯೊಂದಿಗೆ ಶ್ರದ್ಧಾಂಜಲಿ ನಡೆಸಿ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಶಿಕ್ಷಣ ಇಲಾಖೆಯ ಡಿವೈಪಿಸಿ ಧಾರವಾಡ ಎಸ್.ಎಂ. ಹುಡೆದಮನಿ ಡಿ.ವೈ.ಪಿ.ಸಿ, ಡಿಎಚ್ಓ ಡಾ.ಯಶವಂತ ಮದೀನಕರ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಅಬ್ದುಲರಸೀದ ಮಿರಜನ್ನವರ, ಬಿಇಓ ಅಕ್ಬರಲಿ ಖಾಜಿ, ಉಮಾದೇವಿ ಬಸಾಪುರ, KSGMEWA ಸಂಸ್ಥಾಪಕ ಅಧ್ಯಕ್ಷ ಮೊಹಮ್ಮದ್ ಸಲೀಮ್ ಹಂಚಿನಮನಿ ಆಗಮಿಸಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡ್ರ, ವ್ಹಿ ಎಫ್ ಚುಳಕಿ, ವಾಯ್.ಎಚ್. ಬಣವಿ, ಅಬ್ದುಲ್ ಖಾದರ್ ಮೆಣಸಗಿ, ಶಾನವಾಜ ಪಠಾಣ, ಎಂ.ಡಿ. ಮಕಾಂದಾರ, ಮಗದುಮ್ ಹುಸೇನ್ ಕಿಲ್ಲೆದಾರ, ನಿಯಾಜ್ ಅಹ್ಮದ್ ಹಂಚಿನಮನಿ, ಗೌರವಾನ್ವಿತ ಅತಿಥಿಗಳಾಗಿ ಆಗಮಿಸಿದ್ದರು.
ಕಿಮ್ಸ ಪ್ರಾಂಶುಪಾಲ ಡಾ. ಖರಾರ್ ಷಾ ಕಮ್ಮಾರ ಇವರಿಂದ ಕೋವಿಡ- 19ಸುರಕ್ಷತಾ ಕ್ರಮಗಳು ಹಾಗೂ ವ್ಯಾಕ್ಸಿನೇಷನ್ ಕುರಿತು ಉಪನ್ಯಾಸ ಜರುಗಿತು. ಇದೇ ರೀತಿ ಡಾ. ಸೈಯದ್ ಇಸ್ಮಾಯಿಲ್ ಪಾಷಾ ಇವರಿಂದ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತು ಉಪನ್ಯಾಸ ಜರುಗಿತು.
ಸಸಿಗೆ ನೀರು ಹಾಕುವ ಮೂಲಕ ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಾಯಿತು. KSG-MEWA 2021 ರ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಕೋವಿಡ- 19 ವಾರಿಯರ್ಸ್ ಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ KSPSTA, NGO ಚುನಾಯಿತ ಪ್ರತಿನಿಧಿ ಗಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು KSG-MEWA ರಾಜ್ಯ ಜಂಟಿ ಕಾರ್ಯದರ್ಶಿ ಕುಮಾರಿ ಫರಹತ ಖುತೇಜಾ ಝಲಗೆರಿ ಮಾಡಿದರು. ತಬಸ್ಸುಮ ಪಟ್ಟನ್ನದ ಅತಿಥಿ ಗಳ ಸ್ವಾಗತ ಹಾಗೂ ಸನ್ಮಾನ ಕಾರ್ಯಕ್ರಮವನ್ನು ನಿರೂಪಿಸಿದರು, ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಎಂ.ಕೆ. ಘೋಡೆಸವಾರ ಮಾತನಾಡಿದರು.
ಕೋವಿಡ- 19 ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಪಿರೋಜ ಗುಡೆನಕಟ್ಟಿ KSGMEWA ಖಜಾಂಚಿ ಗಳು KSG-MEWA ಜಿಲ್ಲಾ ಘಟಕ ಧಾರವಾಡ, ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಸನ್ಮಾನ ಕಾರ್ಯಕ್ರಮ ಆರ್.ಕೆ.ಪಿಂಜಾರ KSG-MEWA ಸಂಘಟನಾ ಕರ್ಯದರ್ಶಿಗಳು ಜಿಲ್ಲಾ ಘಟಕ ಧಾರವಾಡ ಹಾಗೂ ಬಿ.ಎ ಬಳ್ಳಾರಿ ಶಿಕ್ಷಕರು NGO, KSPSTA ಚುನಾಯಿತ ಪ್ರತನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು.
ಉರ್ದು ಇ.ಸಿ.ಓ ಜುಬೇರ್ ಅಹ್ಮದ್ ಖಂಡುನಾಯ್ಕ ವಂದಿಸಿದರು. KSGMEWA ರಾಜ್ಯ ಸಂಸ್ಥಾಪಕ ಅಧ್ಯಕ್ಷ ಮಹಮ್ಮದ್ ಸಲೀಂ ಹಂಚಿನಮನಿ, KSGMEWA ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಮುಸ್ತಾಕ್ ಅಹ್ಮದ ಸಂಗ್ರೇಸಕೊಪ್ಪ, ಪ್ರಧಾನ ಕಾರ್ಯದರ್ಶಿ ಮಂಜೂರ ಅಹ್ಮದ ಘೋಡೆಸವಾರ ಉಪಸ್ಥಿತರಿದ್ದರು.