ಅತ್ಯಾಚಾರ ಆರೋಪಿ ಕಾರಾಗೃಹದಿಂದ ಖೈದಿ ಪರಾರಿ
1 min read
ಕಲಬುರಗಿ: ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿಯೋರ್ವ ಜೈಲಿನಿಂದ ಪರಾರಿಯಾದ ಘಟನೆ ಕಲಬುರಗಿ ಕಾರಾಗೃಹದಲ್ಲಿ ನಡೆದಿದೆ.
ಜೈಲಿನ ಹೊರಗಡೆ ಕೃಷಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ರಮೇಶ ವಡ್ಡರ ಎಂಬಾತನೇ ಬರ್ಹಿದೆಸೆ ನೆಪವೊಡ್ಡಿ ಪರಾರಿಯಾಗಿದ್ದಾನೆ. ರಮೇಶ್, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದ ನಿವಾಸಿವಾಗಿದ್ದು, ಕೆಲವು ದಿನಗಳ ಹಿಂದೆ ಅತ್ಯಾಚಾರ ಪ್ರಕರಣದಲ್ಲಿ ಜೈಲಿಗೆ ಬಂದಿದ್ದ.
ಜೈಲಿನ ಮುಂದೆ ಇರೋ ಕೃಷಿ ಭೂಮಿಗೆ ಕೆಲಸಕ್ಕೆ ಕಳುಹಿಸಲಾಗಿತ್ತು. ತೊಗರಿ ರಾಶಿ ಮಾಡಲು ಇಂದು ಮುಂಜಾನೆ ಜೈಲು ಸಿಬ್ಬಂದಿ ಆರೋಪಿಯನ್ನ ಹೊರಗೆ ಕಳಿಸಿತ್ತು. ಪರಾರಿಯಾಗಿರೋ ಕೈದಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.