ನಿಮ್ಮ ತಂದೆ ಮುಖಕ್ಕೆ ಮಸಿ ಬಳದವರನ್ನೇ ಪಕ್ಷಕ್ಕೆ ಸೇರಿಸಿಕೊಂಡವರು ನೀವೂ: ರೋಲ್ ಕಾಲ್ ಶಾಸಕರಲ್ಲವೇ..!
1 min read
ಹುಬ್ಬಳ್ಳಿ: ಕನ್ನಡ ಹೋರಾಟಗಾರರನ್ನ ರೋಲ್ ಕಾಲ್ ಮಾಡುವವರು ಎಂದು ಹೇಳಿರುವ ಶಾಸಕ ಅರವಿಂದ ಬೆಲ್ಲದ ಬಗ್ಗೆ, ಕನ್ನಡಪರ ಸಂಘಟನೆಗಳ ಒಕ್ಕೂಟ ಆಕ್ರೋಶವ್ಯಕ್ತಪಡಿಸಿದ್ದು, ಯಾರೂ ರೋಲ್ ಕಾಲ್ ಮಾಡುತ್ತಾರೆಂದು ತೋರಿಸಿ ನಿಮ್ಮನ್ನ ಮೆರವಣಿಗೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.
ಈ ಬಗ್ಗೆ ಪ್ರಕಟನೆಯನ್ನ ಹೊರಡಿಸಿರುವ ಕನ್ನಡಪರ ಸಂಘಟನೆಗಳ ಒಕ್ಕೂಟ, ರೋಲ್ ಕಾಲ್ ಹೋರಾಟಗಾರರು ಯಾರು ಎಂದು ಸಾಭೀತು ಮಾಡದೇ ಇದ್ದರೇ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕನ್ನಡದ ಶಾಲು ಹಾಕಿಕೊಂಡು ಹೋರಾಟಕ್ಕೆ ಇಳಿಯಬೇಕೆಂದು ಕೇಳಿಕೊಂಡಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ನಿಮ್ಮ ತಂದೆಯವರಿಗೆ ಮಸಿ ಬಳಿದವರನ್ನೇ ಇಟ್ಟುಕೊಂಡಿದ್ದೀರಿ. ನೌಕರಿ ಕೊಡಿಸುವ ನೆಪದಲ್ಲಿ ಜನರ ವಂಚನೆಗೆ ಮಾಡಿದವರನ್ನ ನಿಮ್ಮ ಸುತ್ತಮುತ್ತಲೂ ಸಾಕಿಕೊಂಡಿದ್ದೀರಿ. ಈ ಬಗ್ಗೆ ತಾವು ಮಾತನಾಡಬೇಕೆಂದು ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಎಲ್ಲ ಸಾರ್ವಜನಿಕ ಆಸ್ತಿಗಳನ್ನ ಲೂಟಿ ಮಾಡಿ ಬದುಕು ಕಟ್ಟಿಕೊಂಡವರು ನೀವು. ಅಭಿವೃದ್ಧಿಯ ಚಿಂತನೆ ಮಾಡುವುದನ್ನ ಬಿಟ್ಟು ಚಿಲ್ಲರೇ ಹೇಳಿಕೆ ನೀಡಬೇಡಿ ಎಂದು ಒಕ್ಕೂಟದವರು ಆಗ್ರಹಿಸಿದ್ದಾರೆ.
ಒಕ್ಕೂಟದ ಮಂಜುನಾಥ ಲೂತಿಮಠ, ಸಂಜೀವ ಧುಮಕ್ಕನಾಳ, ರವಿ ಕದಂ, ಬಸವರಾಜ ಮಣ್ಣೂರಮಠ, ಗುರುರಾಜ ಅಂಗಡಿ, ಕುಬೇರ ಪವಾರ, ಸತೀಶ ಶೆಟ್ಟಿ ಉಪಸ್ಥಿತರಿದ್ದರು.