ಕಲಘಟಗಿಗೆ ನಾಳೆ ವಾಲ್ಮೀಕಿ ಸಮಾಜದ ಶ್ರೀಗಳ ಆಗಮನ
1 min read
ಕಲಘಟಗಿ: ಫೆಬ್ರುವರಿ 8 ಮತ್ತು 9ರಂದು ಹರಿಹರದ ರಾಜನಹಳ್ಳಿ ಗ್ರಾಮದಲ್ಲಿ ಮೂರನೇ ವರ್ಷದ ವಾಲ್ಮೀಕಿ ಜಾತ್ರೆ ನಡೆಯಲಿದ್ದು ಇದರ ಅಂಗವಾಗಿ ಪೂರ್ವಭಾವಿ ಸಭೆಯನ್ನು ದಿನಾಂಕ 09-01-2021 ಶನಿವಾರ ಮುಂಜಾನೆ ಕಲಘಟಗಿ ಪಟ್ಟಣದ ಹನ್ನೆರಡು ಮಠದಲ್ಲಿ 9:00 ಘಂಟೆಗೆ ಸಭೆ ಕರೆಯಲಾಗಿದೆ.
ಈ ಸಭೆಯ ಅಧ್ಯಕ್ಷತೆಯನ್ನು ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾಂದ ಪುರಿ ಮಹಾಸ್ವಾಮಿಗಳು ವಹಿಸುವರು. ತಾಲೂಕಿನ ವಾಲ್ಮೀಕಿ ನಾಯಕ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶ್ವಸಿಗೂಳಿಸಬೇಕೇಂದು ತಾಲೂಕು ಮಹರ್ಷಿ ವಾಲ್ಮೀಕಿ ಸಂಘದ ಅಧ್ಯಕ್ಷರಾದ ಪಕ್ಕೀರಗೌಡ ದೊಡ್ಡಮನಿ ತಿಳಿಸಿದ್ದಾರೆ.