ಕಲಘಟಗಿ- ಆಪ್ಟರ್ ಮ್ಯಾರೇಜ್ ಲವ್ ಸ್ಟೋರಿ: ಅಂದು ತನ್ನೆಂಡ್ತಿ ಮುಗಿಸಿದ-ಇಂದು ಆಕೆಯ ಗಂಡನ ಕೊಂದ..!
1 min readಹಾವೇರಿ: ತಾನೂ ಪ್ರೀತಿಸಿದ ಮಹಿಳೆಯ ಗಂಡನಿಗೆ ಮೋಸದಿಂದ ಮದ್ಯ ಸೇವನೆ ಮಾಡಿಸಿ, ನಿಸೆಯಲ್ಲಿದ್ದಾಗ ಆತನ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿರುವ ಪ್ರಕರಣ ತಡಸ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಕೊಪ್ಪ ಕ್ರಾಸ್ ಬಳಿ ಸಂಭವಿಸಿದೆ.
ಕಲಘಟಗಿ ತಾಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದ ಅನ್ನಪೂರ್ಣ ಎಂಬಾಕೆ, ಯಲ್ಲಪ್ಪ ಚೋಳಪ್ಪನವರ ಎಂಬಾತನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದು ಅನ್ನಪೂರ್ಣಳ ಪತಿಗೆ ಗೊತ್ತಾಗಿ ಎಲ್ಲಿ ರಾದ್ಧಾಂತವಾಗುತ್ತೋ ಎಂದುಕೊಂಡು ಅನ್ನಪೂರ್ಣಳ ಅನೈತಿಕ ಸಂಬಂಧಿ, ಅನ್ನಪೂರ್ಣಳ ಗಂಡ ಶಿವಾನಂದನನ್ನ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಯಲ್ಲಪ್ಪ ಈ ಹಿಂದೆ ತನ್ನ ಹೆಂಡತಿಯನ್ನ ಕೊಲೆ ಮಾಡಿ ಜೈಲುವಾಸ ಅನುಭವಿಸಿ ಬಂದಿದ್ದಾನೆ. ಅಂದು ತನ್ನ ಸತಿಯನ್ನೇ ಕೊಲೆ ಮಾಡಿದ ಭೂಪ, ಇಂದು ಮತ್ತೋಬ್ಬನ ಸತಿಗಾಗಿ ಆತನ ಪತಿಯನ್ನೇ ಕೊಲೆ ಮಾಡಿ, ಜೈಲು ಪಾಲಾಗಿದ್ದಾನೆ.
ಜೈಲಿನಿಂದ ಬಂದ ಕೆಲವೇ ದಿನಗಳಲ್ಲಿ ಶಿವಾನಂದ ಪತ್ನಿ ಅನ್ನಪೂರ್ಣಳ ಜೊತೆ ಅನೈತಿಕವಾಗಿ ಸಂಬಂಧವನ್ನ ಬೆಳೆಸಿಕೊಂಡಿದ್ದ. ಈತ ಜೈಲಿನಿಂದ ಬಂದವನಾದ್ದರಿಂದ ಶಿವಾನಂದನಿಗೂ ಚೂರು ಭಯವಿತ್ತು. ಇದನ್ನೇ ದೂರುಪಯೋಗ ಪಡಿಸಿಕೊಂಡು, ಆತನನ್ನೇ ಮುಗಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿರುವ ತಡಸ ಠಾಣೆಯ ಪೊಲೀಸರು ಯಲ್ಲಪ್ಪ ಮತ್ತು ಅನ್ನಪೂರ್ಣಳನ್ನ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮತ್ತಷ್ಟು ತನಿಖೆಯನ್ನ ಮುಂದುವರೆಸಿದ್ದಾರೆ.