ಕಲಘಟಗಿ ಯುವ ಕಾಂಗ್ರೆಸ್ ಅಧ್ಯಕ್ಷಗಿರಿಗಾಗಿ ಪೈಪೋಟಿ
1 min read
ಕಲಘಟಗಿ: ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಚುನಾವಣೆ ಕಾವು ಹೆಚ್ಚಾಗಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಸ್ವರೂಪದ ಪೈಪೋಟಿ ನಡೆದಿದ್ದು ಚುನಾವಣಾ ಕಣದಲ್ಲಿ ಕಲಘಟಗಿ ಪಟ್ಟಣದ ಸಂದೀಪ ಬೋಳಾರ ಹಾಗೂ ಅಳ್ನಾವರ ಭಾಗದ ಕ್ಯಾರಕೂಪ್ಪ ಗ್ರಾಮದ ಕುಮಾರಸ್ವಾಮಿ ಆಲದಮಠ ನಡುವೆ ಜಿದ್ದಾ ಜಿದ್ದಿನ ಕದನ ನಡದಿದೆ.
ಕಲಘಟಗಿ ವಿಧಾನಸಭಾ ಮತ ಕ್ಷೇತ್ರದಲ್ಲಿ 2722 ಯುವ ಮತದಾರರು ಇದ್ದು ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಇದ್ದಾರೆ. ಆನಲೈನ ಮೂಲಕ ಮಂಗಳವಾರ ಮತದಾನ ಪ್ರಕ್ರಿಯೆ ನಡೆಯಲಿದೆ.
ಕಲಘಟಗಿ ಭಾಗದಲ್ಲಿ ಹೆಚ್ಚು ಯುವ ಕಾಂಗ್ರೆಸ್ ಸದಸ್ಯರು ಇರುವುದರಿಂದ ಸಂದೀಪ ಬೋಳಾರ ಪರವಾಗಿ ಅಲೆಯಿದೆ ಎಂದು ಹೇಳಲಾಗುತ್ತಿದೆಯಾದರೂ, ಕೊನೆಗಳಿಗೆಯಲ್ಲಿ ಬದಲಾವಣೆ ನಡೆದರೂ ಅಚ್ಚರಿಪಡಬೇಕಿಲ್ಲ.