ಒಂದೇ ವೇಲ್ ಗೆ ಕೊರಳೊಡ್ಡಿದ ಸಹೋದರಿಯರು: ಮುಗಿಲು ಮುಟ್ಟಿದ ಆಕ್ರಂದನ
1 min read
ಕಲಬುರಗಿ: ನಾವೂ ಇದ್ದರೂ ಇರದೇ ಇದ್ದರೂ ಏನೂ ಉಪಯೋಗವಿಲ್ಲ. ನಮ್ಮ ಸಾವಿಗೆ ನಾವೇ ಕಾರಣವೆಂದು ತಿಳಿದುಕೊಳ್ಳಿ. ಎಲ್ಲರನ್ನೂ ಬಿಟ್ಟು ಹೊರಟಿದ್ದೇವೆ ಎನ್ನುವ ನೋವು ಇದೆಯಾದರೂ, ನಾವೂ ಇಬ್ಬರೂ ಕೂಡಿಯೇ ಹೊರಟು ನಿಂತಿದ್ದೇವೆ ಎನ್ನುವ ಥರದ ಪತ್ರವೊಂದನ್ನ ಬರೆದಿಟ್ಟು ಸಹೋದರಿಯರಿಬ್ಬರು ನೇಣಿಗೆ ಶರಣಾದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದಲ್ಲಿ ಸಂಭವಿಸಿದೆ.
ವಿಶ್ವನಾಥ ಪಂಚಾಳ ಎಂಬುವವರ ಇಬ್ಬರು ಮಕ್ಕಳಾದ 19 ವರ್ಷದ ಐಶ್ವರ್ಯ ಹಾಗೂ 17 ವರ್ಷದ ಸಾರಿಕಾ ಮೃತಪಟ್ಟ ದುರ್ದೈವಿಗಳಾಗಿದ್ದು, ಡೆತ್ ನೋಟು ಬರೆದಿಟ್ಟು ಒಂದೇ ವೇಲನಿಂದ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.
ಮನೆಯಲ್ಲಿದ್ದ ಎಲ್ಲರೂ ಊರಿಗೆ ಹೋಗಿದ್ದರು. ಪಾಲಕರು ಹೋಗುವಾಗಲು ನಗು ನಗುತ್ತಲೇ ಕಳಿಸಿಕೊಂಡು ಅಕ್ಕ-ತಂಗಿಯರು ಹೀಗೆ ಮಾಡಿಕೊಂಡಿರುವುದು ಪಾಲಕರಿಗೆ ಆಕಾಶವೇ ಮೇಲೆ ಬಿದ್ದಂತಾಗಿದ್ದು, ಏನೂ ತಿಳಿಯದೇ ಕಣ್ಣೀರು ಹಾಕುತ್ತಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ದೊರೆತ ತಕ್ಷಣವೇ ಸ್ಥಳಕ್ಕೆ ತೆರಳಿರುವ ಚಿಂಚೋಳಿ ಠಾಣೆ ಪೊಲೀಸರು, ಡೆತ್ ನೋಟನ್ನ ವಶಕ್ಕೆ ಪಡೆದು ಮುಂದಿನ ವಿಚಾರಣೆಯನ್ನ ನಡೆಸಿದ್ದಾರೆ.