ರಾಜ್ಯೋತ್ಸವವನ್ನ ರೈತರಿಗಾಗಿ ಆಚರಿಸಿದ ಜಯ ಕರ್ನಾಟಕ: ಜನರ ಪ್ರೀತಿಗೆ ಪಾತ್ರವಾದ ಸಂಘಟಕರು
1 min read
ಧಾರವಾಡ: ಕನ್ನಡ ರಾಜ್ಯೋತ್ಸವವನ್ನ ಜಯ ಕರ್ನಾಟಕ ಸಂಘಟನೆ ವಿಭಿನ್ನವಾಗಿ ಆಚರಣೆ ಮಾಡುವ ಮೂಲಕ, ದೇಶದ ಬೆನ್ನೆಲಬು ಎಂದು ಕರೆಸಿಕೊಳ್ಳುವ ರೈತರಿಗೆ ಸಹಾಯ ಮಾಡಿದರು. ಇದರಿಂದ ರೈತ ವರ್ಗ ಖುಷಿ ಪಡುವಂತಹ ರಾಜ್ಯೋತ್ಸವವನ್ನ ಆಚರಣೆ ಮಾಡಲಾಯಿತು.
ಕರ್ನಾಟಕದಲ್ಲಿ ಕನ್ನಡವೇ ಸತ್ಯ.. ಕನ್ನಡವೇ ನಿತ್ಯ ಎನ್ನುವ ಹಾಗೇ, ಪ್ರತಿಯೊಬ್ಬರ ಜೀವನ ನಡೆಯಬೇಕಾದರೇ ರೈತ ವರ್ಗವೇ ಮುಖ್ಯ ಎಂಬುದನ್ನ ಅರಿತ ಜಯ ಕರ್ನಾಟಕ ಸಂಘಟನೆ ರೈತರಿಗೆ ಬಿತ್ತುವ ಬೀಜವನ್ನ ನೀಡಿ, ಖುಷಿಯನ್ನ ಅನುಭವಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ಹೈಕೋರ್ಟ್ ನ್ಯಾಯವಾದಿ ಹಾಗೂ ಸಾಮಾಜಿಕ ಹೋರಾಟಗಾರ ಬಿ.ಡಿ.ಹಿರೇಮಠ ಅವರು ಮಾತನಾಡಿ, ಜಯ ಕರ್ನಾಟಕ ಸಂಘಟನೆ ಇಂತಹ ಯೋಜನೆಯನ್ನ ರೂಪಿಸಿದ್ದು ನಂಗೆ ಹರ್ಷವನ್ನ ತಂದಿದೆ. ರೈತರ ಬಗ್ಗೆ ಕಾಳಜಿ ಹೊಂದಿರುವ ಸಂಘಟಕರಿಗೆ ಧನ್ಯವಾದ ಅರ್ಪಿಸಿದರು.
ಹಿರಿಯ ಪತ್ರಕರ್ತ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಆನೆಗುಂದಿ ಅವರನ್ನ ಇದೇ ಸಮಯದಲ್ಲಿ ಬಿ.ಡಿ.ಹಿರೇಮಠ ಸತ್ಕರಿಸಿದರು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ ಮುಧೋಳ, ಹಿರಿಯ ಮುಖಂಡ ಲಕ್ಷ್ಮಣ ದೊಡ್ಡಮನಿ, ಹಿರಿಯ ಪತ್ರಕರ್ತ ಡಾ. ವೆಂಕನಗೌಡ ಪಾಟೀಲ, ಸಂತೋಷ ಮಠಪತಿ, ಸಾಹಿತಿಗಳಾದ ಡಾ. ಸಿದ್ರಾಮ ಕಾರಣಿಕ, ಮಾರ್ತಾಂಡಪ್ಪ ಕತ್ತಿ, ಪತ್ರಕರ್ತ ಚಂದ್ರಶೇಖರ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು