ಧರ್ಮಪತ್ನಿ ಸಮೇತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಿದ ಸಚಿವ ಜಗದೀಶ ಶೆಟ್ಟರ…!
1 min read
ಹುಬ್ಬಳ್ಳಿ: ಚರ್ಮ ಉತ್ಪನ್ನಗಳ ತಯಾರಿಕಾ ತರಬೇತಿ ಪಡೆದ 29 ಮಹಿಳಾ ಫಲಾನುಭವಿಗಳಿಗೆ ಮಧುರಾ ಕಾಲೋನಿಯ ಗೃಹ ಕಚೇರಿಯಲ್ಲಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಹೊಲಿಗೆ ಯಂತ್ರ, ಸಲಕರಣೆ ಪೆಟ್ಟಿಗೆ ಹಾಗೂ ಅರ್ಹತಾ ಪತ್ರಗಳನ್ನು ವಿತರಿಸಿದರು.
ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರ ವ್ಯಾಪ್ತಿಯ ರಾಮನಗರದ 29 ಮಹಿಳೆಯರಿಗೆ ಒಟ್ಟು 10.5 ಲಕ್ಷ ವೆಚ್ಚದಲಿ 60 ದಿನಗಳ ಚರ್ಮ ತಯಾರಿಕಾ ತರಬೇತಿಯನ್ನು ಆಯೋಜಿಸಲಾಗಿತ್ತು. ಪ್ರತಿ ಫಲಾನುಭವಿಗೆ ತರಬೇತಿ ಅವಧಿಯಲ್ಲಿ ರೂ.6000 ಭತ್ಯೆಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ತರಬೇತಿ ನಂತರ ರೂ. 17500 ಮೌಲ್ಯದ ಹೊಲಿಗೆ ಯಂತ್ರ ಹಾಗೂ ಸಲಕರಣೆ ಪೆಟ್ಟಿಗೆಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಸಚಿವರ ಧರ್ಮಪತ್ನಿ ಶಿಲ್ಪಾ ಜಗದೀಶ್ ಶೆಟ್ಟರ್, ಲಿಡ್ಕರ್ ಜಿಲ್ಲಾ ಸಂಯೋಜಕ ಎ.ಎಸ್.ರುದ್ರೇಶ್, ಮುಖಂಡರುಗಳಾದ ಲಿಂಗರಾಜ ಪಾಟೀಲ, ಸಂತೋಷ್ ಚವ್ಹಾಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.