ಹುಬ್ಬಳ್ಳಿ-ಧಾರವಾಡದಲ್ಲಿ ಇನ್ನೋವ್ವಾ ಕಳ್ಳತನ ಪ್ರಕರಣ- ಬೆಳಗಾವಿಯಲ್ಲೂ ಕ್ರಿಸ್ಟಾ ಮಂಗಮಾಯ..!
1 min read
ಹುಬ್ಬಳ್ಳಿ-ಬೆಳಗಾವಿ: ವಾಣಿಜ್ಯನಗರಿ ಹಾಗೂ ವಿದ್ಯಾನಗರಿಯಲ್ಲಿ ತಲಾ ಒಂದೊಂದು ಇನ್ನೋವ್ವಾ ಕ್ರಿಷ್ಟಾ ವಾಹನಗಳು ಕದ್ದು ಇನ್ನೂ ಯಾವುದೇ ಮಾಹಿತಿ ದೊರೆಯದ ಸಮಯದಲ್ಲೇ ಬೆಳಗಾವಿಯಲ್ಲಿ ಮತ್ತೆರಡು ಕ್ರಿಸ್ಟಾ ವಾಹನಗಳನ್ನ ಕಳ್ಳತನ ಮಾಡಲಾಗಿದ್ದು, ಹೈಟೆಕ್ ಕಳ್ಳರಿಂದಲೇ ಇದು ನಡೆಯುತ್ತಿದೆ.
ಬಹುತೇಕರು ಡಿಜಿಟಲ್ ಇಂಡಿಯಾ ಮಂತ್ರ ಜಪಿಸುತ್ತಿದ್ದಾರೆ, ಪೇಪರ್ ಲೆಸ್ ವ್ಯವಹಾರ ಮಾಡುತ್ತಿದ್ದಾರೆ. ನಾವ್ಯಾಕೆ ಸುತ್ತಿಗೆ ರಾಡ್ ಬಳಿಸಿ ಕಳ್ಳತನ ಮಾಡಬೇಕು. ನಾವೂ ಡಿಜಿಟಲ್ ಆಗಿ, ನಾವೂ ಹೈಟೆಕ್ ಆಗಿದ್ದೇವೆ ಅಂತಾ ಕಳ್ಳರು ಸಾಬೀತು ಮಾಡುವಂತ ಕೃತ್ಯಗಳನ್ನ ಮಾಡುತ್ತಿದ್ದಾರೆ. ಅಧುನಿಕ ತಂತ್ರಜ್ಞಾನ ಬಳಿಸಿ ಅವಳಿನಗರದಲ್ಲಿ ನಡೆದ ಕಳ್ಳತನ ಪ್ರಕರಣಗಳು ಹಚ್ಚಹಸಿರಿರುವಾಗಲೇ ಬೆಳಗಾವಿಯಲ್ಲಿ ಎರಡು ಹೊಸ ಇನ್ನೋವಾ ಕ್ರಿಸ್ಟಾ ಕಾರುಗಳನ್ನು ದೋಚಿದ್ದಾರೆ.
ದಸರಾ ಹಬ್ಬದಲ್ಲಿ ಖರೀದಿಸಿ ಪೂಜೆ ಮಾಡಿ ರೌಂಡ್ ಹಾಕಿ ಮನೆ ಮುಂದೆ ನಿಲ್ಲಿಸಿದ ಎರಡು ಹೊಸ ಇನ್ನೋವಾ ಕಾರುಗಳನ್ನು ಕಳುವು ಮಾಡಿದ ಘಟನೆ ಬೆಳಗಾವಿಯ ಮಾಳ ಮಾರುತಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಸದಾಶಿವ ನಗರದ ಡಾ. ಬೆಲ್ಲದ ಹಾಗೂ ರಾಮತೀರ್ಥ ನಗರದ ಅನಿಲ ಪಾಟೀಲ ಎಂಬುವವರಿಗೆ ಸೇರಿದ ಎರಡು ಇನ್ನೋವಾ ಕಾರುಗಳು ಕಳುವಾದ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೋವಾ ಕಾರಿನ ಲಾಕ್ ಮುರಿಯಲು ಈ ಕಳ್ಳರು ಸುತ್ತಿಗೆ,ರಾಡ್ ಬಳಿಸಿಲ್ಲ ಸಾಫ್ಟವೇರ್ ಮೂಲಕ ಕಾರಿನ ಲಾಕ್ ತೆರವು ಮಾಡಿರುವ ದೃಶ್ಯ ಸಿಸಿ ಟಿವ್ಹಿ ಕ್ಯಾಮರಾದಲ್ಲೆ ಸೆರೆಯಾಗಿದ್ದು,ಮಾಳ ಮಾರುತಿ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಹೈಟೆಕ್ ಕಳ್ಳರ ಪತ್ತೆಗಾಗಿ ಅವರದ್ದೇ ರೀತಿಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.