ಹೆಡ್ಡಾಫೀಸಲ್ಲೇ ಭ್ರಷ್ಟಾಚಾರ: ಬೇಲಿ ಎದ್ದು ಹೊಲ ಮೇಯ್ತಿದೆ- Big Exclusive
1 min read
ಹುಬ್ಬಳ್ಳಿ: ಸಮಾಜಕ್ಕೆ ಕಂಟಕ ಆಗುವವರನ್ನ ರೌಡಿ ಷೀಟರ್ ಮಾಡಿ ಅವರಿಗೆ ಹದ್ದು ಬಸ್ತಿನಲ್ಲಿಡುವುದನ್ನ ಇಲಾಖೆ ಮೊದಲಿಂದಲೂ ರೂಢಿಸಿಕೊಂಡು ಬಂದಿದೆ. ಆದರೆ, ಇಲಾಖೆಯ ಹೆಡ್ಡಾಫೀಸ್‌ಲ್ಲೇ ಮಹಾನುಭಾವ ರೌಡಿ ಷೀಟರ್‌ಗಳಿಂದ ಹಣ ಪಡೆಯುವ ವೀಡಿಯೋ ವೈರಲ್ ಆಗಿದ್ದು, ಅದನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕುತ್ತಿದೆ.
ಕಳೆದ 24 ಗಂಟೆಗಳ ಹಿಂದೆ ಇಂತಹದೊಂದು ಸುದ್ದಿಯನ್ನ ಹೊರ ಹಾಕುತ್ತೇವೆಂದು ಮಾಹಿತಿ ಹೊರ ಹಾಕಿದ ತಕ್ಷಣವೇ ಹಲವರು ‘ನಂದಾ… ಅವನದಾ… ಇವನದಾ..’ ಎಂದು ಮಾತಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಕೆಲವರಂತೂ ಸರಿಯಾಗಿ ನಿದ್ದೆ ಮಾಡಿಲ್ಲವೆಂಬುದು ಗೊತ್ತಾಗಿದೆ. ಈಗ ಸಿಕ್ಕಿರುವ ವೀಡಿಯೋ ಯಾರದ್ದು ಎಂಬುದು “ಹಿರಿಯ”ರಿಗೆ ಗೊತ್ತಾಗಿ, ಇಂಥವರ ಬಗ್ಗೆ ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ.
ವೀಡಿಯೋ ಇಲ್ಲಿದೆ ನೋಡಿ…
ಈತ ಯಾರೂ… ಮುಂದಿರುವ ರೌಡಿ ಷೀಟರ್ ಯಾರೂ… ಯಾವ ಕಾರಣಕ್ಕೆ ಹೆಡ್ಡಾಫೀಸ್‌ಗೆ ಬಂದಿದ್ದಾ, ಅದೇಲ್ಲ ವಿವರವನ್ನ ” ಕೆವಿ” ಮತ್ತೆ ನಿಮ್ಮ ಮುಂದಿಡಲಿದೆ.