ಮೇರಾ ತೋ.. ಜೋ ಬಿ ಕದಮ್ ಹೈ.. ವೋ.. ತೇರಿ ರಾಹ್ ಮೇ ಹೈ.. ಆತ್ಮಸಂಗಾತಿಗೆ ಅಂತಿಮ ನಮನ ಸಲ್ಲಿಸಿದ ಬಸವರಾಜ ಹೊರಟ್ಟಿ..!
1 min read
ಹುಬ್ಬಳ್ಳಿ: ಅದು ಹಲವು ದಶಕಗಳ ಆತ್ಮೀಯತೆ. ಅಲ್ಲಿ ಅಧಿಕಾರ, ಜಾತಿ, ಹಣ ಯಾವುದಕ್ಕೂ ಜಾಗವಿಲ್ಲ. ಅವರು ತೆಗೆದುಕೊಂಡ ತೀರ್ಮಾನಕ್ಕೆ, ಇವರೆಂದೂ ವಿರೋಧಿಸಲಿಲ್ಲ. ಅದೂ ಎಂದೂ ಮುಗಿಯದ ಬಂಧವಾಗಿತ್ತು. ಆದರಿಂದು ಆ ಬಂಧನದ ದೇಹಗಳು ಬೇರೆಯಾದವೂ. ಅಲ್ಲಿ ಇದ್ದಿದ್ದು ಕಣ್ಣೀರು.. ಕಣ್ಣೀರು ಮತ್ತೂ ಕಣ್ಣೀರು..
ಹೌದು.. ನಾವೂ ಹೇಳಲು ಹೊರಟಿರುವ ನಿವೃತ್ತ ಶಿಕ್ಷಕರಾಗಿದ್ದ ಎಂ.ಬಿ.ನಾತು ಅವರ ಹಾಗೂ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರ ಬಗ್ಗೆ. ಹೊರಟ್ಟಿಯವರಿಂದು ತಮಗಿಷ್ಟವಾದವರನ್ನ ಕಳೆದುಕೊಂಡರು. ಹಾಗಾಗಿಯೇ, ಯಾವುದನ್ನೂ ಲೆಕ್ಕಿಸದೇ ವಿದ್ಯಾನಗರದ ರುದ್ರಭೂಮಿಯಲ್ಲಿ ಬಂದು ನಿಂತಿದ್ದರು.
ಶಿಕ್ಷಕರಾಗಿದ್ದ ಬಸವರಾಜ ಹೊರಟ್ಟಿಯವರನ್ನ ವಿಧಾನಪರಿಷತ್ ಅಖಾಡಾಕ್ಕೆ ಕಳಿಸಿದ್ದು ಇದೇ ಎಂ.ಬಿ.ನಾತು ಸರ್. ಅವತ್ತಿಂದ ಇವತ್ತಿನವರೆಗೂ ಹೊರಟ್ಟಿಯವರ ಚುನಾವಣೆಯ ಚಾಣಕ್ಯರಾಗಿದ್ದು ಇವರೇ. ಅವರಿಬ್ಬರ ಸಂಬಂಧಕ್ಕೆ ಸಾಟಿಯಾಗಿದ್ದು ಯಾವುದೂ ಇರಲಿಲ್ಲ. ಹಾಗಾಗಿಯೇ ಇಂದು ನಾತು ಸರ್ ತೀರಿಕೊಂಡಾಗ, ಹೊರಟ್ಟಿಯವರು ಬಾರದೂರಿಗೆ ಹೊರಟ ಆತ್ಮಸಂಗಾತಿಗೆ ಭಾರವಾದ ಮನಸ್ಸಿನಿಂದಲೇ ಬೀಳ್ಕೋಟ್ಟರು.
ನೂರಾರೂ ಜನರ ದೂರದಲ್ಲಿ ನಿಂತಿದ್ದರೂ ಯಾವುದಕ್ಕೂ ಅಳುಕದೇ ತಾವೇ ಮುಂದೆ ನಿಂತು, ಎಲ್ಲವನ್ನೂ ನಿಭಾಯಿಸಿದರು. ಪ್ರತಿ ಹೆಜ್ಜೆಯಿಡುವಾಗಲೂ ಅವರ ದೇಹ ಕಂಪಿಸುವಂತೆ ಕಾಣುತ್ತಿತ್ತು. ನಾತು ಸರ್ ಬಗ್ಗೆ ಹೊರಟ್ಟಿಯವರಿಗಿದ್ದ ಬಾಂಧವ್ಯ ಎಂತಹದು ಎಂಬುದು ಈ ಮೂಲಕ ಕಂಡು ಬರುತ್ತಿತ್ತು.