ಹವಾಲ್ದಾರ ಪತ್ನಿ ನೇಣಿಗೆ ಶರಣು- ತಬ್ಬಲಿಯಾದ ಮಕ್ಕಳು
1 min read
ಚಿತ್ರದುರ್ಗ: ಮಾನಸಿಕವಾಗಿ ನೊಂದುಕೊಂಡು ತಮ್ಮದೇ ಮನೆಯಲ್ಲಿ ಮುಖ್ಯ ಪೇದೆಯೋರ್ವರ ಪತ್ನಿ ನೇಣಿಗೆ ಶರಣಾದ ಘಟನೆ ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆಯ ನಿವಾಸದಲ್ಲಿ ಸಂಭವಿಸಿದ್ದು, ಶವವನ್ನ ಮರಣೋತ್ತರ ಪರೀಕ್ಷೆಯಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ನಗರದ ಬಡಾವಣೆ ಠಾಣೆಯ ಮುಖ್ಯ ಪೇದೆ ಕುಬೇರಪ್ಪನವರ ಪತ್ನಿ ಗಂಗಮ್ಮ ಎಂಬುವವರೇ ನೇಣಿಗೆ ಶರಣಾಗಿದ್ದಾರೆ. ಕುಬೇರಪ್ಪನವರು ಕರ್ತವ್ಯಕ್ಕೆ ಹೋಗಿ ಮರಳಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಯಾವ ಕಾರಣಕ್ಕೆ ಗಂಗಮ್ಮ ಹೀಗೆ ಮಾಡಿಕೊಂಡಿದ್ದಾರೆಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಮುಖ್ಯಪೇದೆ ಕುಬೇರಪ್ಪನವರ ಜೊತೆ ಯಾವತ್ತೂ ಜಗಳವನ್ನೂ ಮಾಡದ ಮಹಿಳೆ ಹೀಗೇಕೆ ಮಾಡಿಕೊಂಡಿದ್ದಾರೆಂದು ಎಲ್ಲರೂ ಅಚ್ಚರಿಪಡುತ್ತಿದ್ದಾರೆ.
ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಚಿತ್ರದುರ್ಗ ನಗರ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.