ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ: ಸರಕಾರಕ್ಕೆ ಮನವಿ
1 min read
ಧಾರವಾಡ: ಇತರ ಸಮುದಾಯಗಳಂತೆ ರಾಜ್ಯದಲ್ಲಿ ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ ಧಾರವಾಡ ಜಿಲ್ಲಾ ಘಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಮೂಲಕ ಮನವಿ ಸಲ್ಲಿಸಿದ ಒಕ್ಕೂಟ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಸರ್ವ ಜನಾಂಗದ ಅಭಿವೃದ್ಧಿಗೆ ಹಗಲಿರುಳ ಶ್ರಮಿಸುತ್ತಿರುವುದಕ್ಕೆ ತುಂಬು ಹೃದಯದಿಂದ ಅಭಿನಂದಿಸಿದೆ.
ಸರ್ಕಾರ ಅನೇಕ ಯೋಜನೆ ಜಾರಿಗೆ ತರುವ ಮೂಲಕ ಸರ್ವ ಸಮಾಜದ ಶ್ರೇಯೋಭಿವೃದ್ಧಿಗೆ ದುಡಿಯುತ್ತಿದೆ. ಇದೀಗ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಒಕ್ಕೂಟವು ಮುಕ್ತ ಮನಸ್ಸಿನಿಂದ ಸ್ವಾಗತಿಸಿದೆ.
ರಾಜ್ಯದಲ್ಲಿ ೧೪ ಲಕ್ಷಕ್ಕೂ ಅಧಿಕ ವಿಲಚೇತನರಿದ್ದಾರೆ. ಈ ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ದೃಷ್ಟಿಯಿಂದ ಹಿಂದುಳಿದಿದೆ. ಈ ಸಮಾಜದ ಜನರನ್ನು ಮುಖ್ಯವಾಹಿನಿಗೆ ತರುವ ಕೆಲಸ ಸರ್ಕಾರ ಮಾಡಬೇಕಿದೆಂದು ಒಕ್ಕೂಟ ಒತ್ತಾಯಿಸಿದೆ.
ವಿವಿಧ ಇಲಾಖೆಗಳಲ್ಲಿ ಸದ್ಯ ಶೇ.೫ ಮೀಸಲಾತಿ ಇದೆ. ಅದರಲ್ಲೇ ಅಂಧತ್ವ, ಕಿವುಡು, ದೈಹಿಕ ಅಂಗವಿಕಲರು, ಮಾನಸಿಕ ಖಿನ್ನತೆ, ಆಸಿಡ್ ದಾಳಿ ಹೀಗೆ ೨೧ ವಿಭಾಗದಲ್ಲಿ ವಿಂಗಡಿಸಿದೆ. ಇದರಿಂದ ಬಹುತೇಕ ಫಲಾನುಭವಿUಳು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆAದು ಒಕ್ಕೂಟ ಮನವರಿಕೆ ಮಾಡಿದೆ.
ಹೀಗಾಗಿ ವಿಲಕಚೇತನ ಸಮುದಾಯ ಆರ್ಥಿಕ, ಸಾಮಾಜಿ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ‘ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪನೆ ಜತೆ ರೂ.೧೦೦೦ ಕೋಟಿ ಅನುದಾನ ಮೀಸಲಿಟ್ಟು ಅಂಗವಿಕಲ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಒಕ್ಕೂಟ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಕೇಶವ ತೆಲಗು, ಯಮನಪ್ಪ ಅರಬಳ್ಳಿ ಹಾಗೂ ಮಂಜುನಾಥ ಇದ್ದರು.