Posts Slider

Karnataka Voice

Latest Kannada News

ಹಿರಿಯ ಪತ್ರಕರ್ತ ಹನಮಂತ ಹೂಗಾರ ಇನ್ನಿಲ್ಲ

1 min read
Spread the love

ಹುಬ್ಬಳ್ಳಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಹನಮಂತ ಹೂಗಾರ ಆಕಸ್ಮಿಕವಾಗಿ ಇಂದು ಹುಬ್ಬಳ್ಳಿಯಲ್ಲಿ ನಿಧನರಾದರು.

ನಾಡೋಜ ದಿವಂಗತ ಪಾಟೀಲ ಪುಟ್ಟಪ್ಪ ಅವರ ವಿಶ್ವವಾಣಿ ಹಾಗೂ ಪ್ರಪಂಚ ಪತ್ರಿಕೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹನಮಂತ ಹೂಗಾರ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಸದಸ್ಯರೂ ಆಗಿದ್ದರು. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ನಿಕಟವರ್ತಿಯಾಗಿದ್ದರು.

ಹಿರಿಯ ಪತ್ರಕರ್ತ ದಿಗ್ವಿಜಯ ಚಾನಲ್ ನ ಮಾಜಿ ಮುಖ್ಯ ಸಂಪಾದಕ ಹಾಗೂ ಪಬ್ಲಿಕ್ ನ್ಯೂಸ್ ಆ್ಯಪ್ ನ ಕರ್ನಾಟಕದ ಮುಖ್ಯಸ್ಥರಾಗಿರುವ ಸುಭಾಷ ಹೂಗಾರವರು ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಪುತ್ರಿ, ಧರ್ಮಪತ್ನಿಯನ್ನ ಅಗಲಿದ್ದಾರೆ.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೋಳ್ಳಿ, ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಜೆ.ಅಬ್ಬಾಸ ಮುಲ್ಲಾ, ರಾಜ್ಯ ಕಾರ್ಯಕಾರಿಣಿ ಸಮಿತಿ  ಸದಸ್ಯ ಲೋಚನೇಶ ಹೂಗಾರ ಸೇರಿದಂತೆ ಪತ್ರಕರ್ತ ಸಮೂಹ, ಹನಮಂತ ಹೂಗಾರ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ (74)ಇಂದು ಮಧ್ಯಾಹ್ನ ನಿಧನರಾದರು. ಮ್ತತರು ಪತ್ನಿ, ಇಬ್ಬರು ಪುತ್ರರು, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.   ರಾತ್ರಿ 8 ಗಂಟೆಗೆ ಅಂತ್ಯಯಾತ್ರೆಯು ಬಮ್ಮಾಪುರ ಓಣಿ ಸ್ವಗ್ರಹದಿಂದ ಹೊರಟು ಕೌದಿಮಠ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗುವುದು. ಇತ್ತೀಚೆಗೆ ಧಾರವಾಡ ಜಿಲ್ಲಾ ಕಾರ್ಯನಿರತ  ಪತ್ರಕರ್ತರ ಸಂಘದಿಂದ ಕೊಡಮಾಡುವ  ೨೦೨೦ನೇ ಸಾಲಿನ ‘ಜೀವಮಾನ ಸಾಧನೆ’  ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ  ಹನುಮಂತ ಹೂಗಾರ  ಅವರು ಭಾಜನರಾಗಿದ್ದರು. ಹೂಗಾರ ಅವರು ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನೇತಾಜಿ, ವಿಶಾಲ  ಕರ್ನಾಟಕ, ಪ್ರವರ್ತಕ, ಕುಟುಂಬ ಹಾಗೂ ವಿಶ್ವವಾಣಿ ಮುಂತಾದೆಡೆ ಸೇವೆ ಸಲ್ಲಿಸಿರುವ  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ  ಸೇವೆ ಸಲ್ಲಿಸಿದ್ದಾರೆ. ಪ್ರತಿಷ್ಟಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಯನ್ನೂ ಪಡೆದಿರುವ ಇವರು ಮಹಾನಗರಪಾಲಿಕೆ ಸದಸ್ಯರಾಗಿಯೂ ಒಂದು ಅವಧಿ ಕಾರ್ಯ ನಿರ್ವಹಿಸಿದ್ದಾರೆ. ಸಂತಾಪ; ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ, ಪದಾಧಿಕಾರಿಗಳು  ಹೂಗಾರ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ


Spread the love

Leave a Reply

Your email address will not be published. Required fields are marked *