ಸಾಲ ಮಾಡಿ ಪತ್ನಿ ಚುನಾವಣೆಗೆ ನಿಲ್ಲಿಸಿದ ಪತಿ: ಸೋತ ನಂತರ ತಾನೇ ರೈಲು ಹಳಿಗೆ ತಲೆಕೊಟ್ಟ..!
1 min read
ಕಲಬುರಗಿ: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ತನ್ನ ಪತ್ನಿಯನ್ನ ಕಣಕ್ಕೆ ಇಳಿಸಿದ್ದ ಪತಿ ಪತ್ನಿಯ ಸೋಲಿನಿಂದ ಕಂಗೆಟ್ಟು ಸಾಲವನ್ನ ತೀರಿಸಲಾಗದೇ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಇಟಗಾ ಗ್ರಾಮದಲ್ಲಿ ಸಂಭವಿಸಿದೆ.
ಕರಬಸಪ್ಪ ಪಾಟೀಲ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರು ತನ್ನ ಮಡದಿ ಸಂಗಮ್ಮ ಅವರನ್ನ ಚುನಾವಣೆಗೆ ನಿಲ್ಲಿಸಿದ್ದರು. ಇದೇ ಕಾರಣಕ್ಕೆ ಕರಬಸಪ್ಪ, ಬ್ಯಾಂಕ್ ಹಾಗೂ ಖಾಸಗಿಯಾಗಿ ಸಾಲ ಪಡೆದಿದ್ದ. ಅಷ್ಟೇ ಅಲ್ಲ, ಚುನಾವಣೆಯಲ್ಲಿ ಪತ್ನಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು.
ಮೊಗಲಾ ಗ್ರಾ ಪಂ ವ್ಯಾಪ್ತಿಗೊಳಪಡುವ ಇಟಗಾ ಗ್ರಾಮದಿಂದ ಪತ್ನಿ ಸಂಗಮ್ಮ ಸ್ಪರ್ಧಿಸಿದ್ದರು. ಪತ್ನಿ ಸಂಗಮ್ಮ ಸೋಲಿನ ಬಳಿಕ ಸಾಲಗಾರರ ಕಾಟದಿಂದ ಮಾನಸಿಕವಾಗಿ ಕುಗ್ಗಿದ್ದ ಪತಿ ಕರಬಸಪ್ಪ, ಕಳೆದ ರಾತ್ರಿ ಇಟಗಾ ಗ್ರಾಮದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.