ಗ್ರಾಮ ಪಂಚಾಯತಿಗೆ ಸದಸ್ಯರಾಗಬೇಕೆ.. ಬನ್ನಿ ನಿಮ್ಮದೇ ಹರಾಜಿದೆ… !
1 min read
ಕಲಬುರಗಿ: ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಿಗದಿಯಾದ ಬೆನ್ನಲ್ಲೇ ಸದಸ್ಯರಾಗಲು ತರಹೇವಾರಿ ಕಸರತ್ತುಗಳನ್ನ ನಡೆಸುತ್ತಿರುವ ಹಣ ಮಾಡುವ ಹುಚ್ಚಿನ ಸದಸ್ಯರಿಗೆ ಗ್ರಾಮದವರೇ ಹೊಸ ಪಾಠವನ್ನ ಕಲಿಸಿದ್ದು, ನಾಲ್ಕು ಸ್ಥಾನಗಳನ್ನ ಹರಾಜು ಹಾಕುವ ಮೂಲಕ ಹೊಸದೊಂದು ರೀತಿಗೆ ನಾಂದಿ ಹಾಡಿದ್ದಾರೆ.
ಹರಾಜಿನ ವೀಡಿಯೋ..
ಕಲಬುರಗಿ ಜಿಲ್ಲೆಯ ಯಡ್ರಾವಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕು ಸ್ಥಾನಗಳಿಗಾಗಿ ಚುನಾವಣೆ ನಡೆಯುತ್ತಿದೆ. ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅದಕ್ಕಾಗಿಯೇ ನಾಲ್ಕು ಸ್ಥಾನಗಳಿಗಾಗಿ ಗ್ರಾಮಸ್ಥರು ಹರಾಜು ಹಾಕಿದ್ದಾರೆ.
ನಾಲ್ಕು ಸ್ಥಾನಗಳಿಗೂ ಒಂದು ಲಕ್ಷ ರೂಪಾಯಿಯಿಂದ ಹರಾಜು ಆರಂಭವಾಗಿ ನಾಲ್ಕು ಸ್ಥಾನಗಳು ಸೇರಿ ಬರೋಬ್ಬರಿ 26 ಲಕ್ಷ 50 ಸಾವಿರಕ್ಕೆ ಹರಾಜು ಪೈನಲ್ ಆಗಿದೆ. ಹರಾಜಿನಲ್ಲಿ ಗೆದ್ದವರು ನಾಳೆ ನಾಮಪತ್ರ ಸಲ್ಲಿಸಲಿದ್ದಾರೆ.
ಹರಾಜು ನಡೆಯುವ ಸಮಯದಲ್ಲಿ ಐದು ವರ್ಷಕ್ಕೆ ಎರಡೂವರೆ ಕೋಟಿ ರೂಪಾಯಿ ಅನುದಾನ ಬರತ್ತೆ.. ಕೂಗಿ.. ಕೂಗಿ ಎಂದು ಹೇಳುತ್ತಿದದ್ದು ಸಾಮಾನ್ಯವಾಗಿತ್ತು. ಗ್ರಾಮಗಳ ಅಭಿವೃದ್ಧಿಯ ಕನಸು ಕಾಣುವ ಗ್ರಾಮ ಪಂಚಾಯತಿ ಸ್ಥಾನಗಳೇ ಹರಾಜು ಆಗುತ್ತಿರುವುದು ದುರಂತವೇ ಸರಿ.