ಗೋಕರ್ಣ ಬಳಿ ಹುಬ್ಬಳ್ಳಿ ದರೋಡೆಕೋರರ ಬಂಧನ
1 min read
ಉತ್ತರಕನ್ನಡ: ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಐವರನ್ನ ಬಂಧನ ಮಾಡುವಲ್ಲಿ ಜಿಲ್ಲೆಯ ಗೋಕರ್ಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ಎಲ್ಲರೂ ಹುಬ್ಬಳ್ಳಿಯ ನಿವಾಸಿಗಳಾಗಿದ್ದಾರೆ.
ಬೆಟಗುಳಿ ಬಳಿ ಕಾರಿನಲ್ಲಿ ಖಾರದ ಪುಡಿ ಹಾಗೂ ಮಾರಕಾಸ್ತ್ರಗಳನ್ನಿಟ್ಟುಕೊಂಡು ಹೊಂಚು ಹಾಕುತ್ತಿದ್ದ ಸಮಯದಲ್ಲಿ ಸಂಶಯದಿಂದ ತಪಾಸಣೆ ಮಾಡಿದಾಗ ದರೋಡೆಯ ಹೊಂಚು ಬೆಳಕಿಗೆ ಬಂದಿದೆ.
ಬಂಧಿತರನ್ನ ಹಳೇಹುಬ್ಬಳ್ಳಿ ಆನಂದನಗರದ ವಾಟರ್ ಟ್ಯಾಂಕ್ ಹತ್ತಿರದ ನಿವಾಸಿ ಓಂಪ್ರಕಾಶ ಉಮೇಶ ಮಠದ, ಗುರುನಾಥನಗರದದ ಆಟೋಚಾಲಕ ಪ್ರಕಾಶ ಅಲಿಯಾಸ್ ಅಪ್ಪಿ ದೇವೆಂದ್ರಪ್ಪ ಗುಲುಗಪ್ಪನವರ, ಹಳೇಹುಬ್ಬಳ್ಳಿ ನಿವಾಸಿ ರಾಕೇಶ ಹನಮಂತಪ್ಪ ಭಜಂತ್ರಿ, ಶಿವಶಂಕರ ಕಾಲೋನಿಯ ಗಣೇಶ ಹಾಗೂ ಆನಂದನಗರದ ರಫೀಕ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ದರೋಡೆಗೆ ಬಳಕೆಯಾಗುತ್ತಿದ್ದ ಕಾರು ಹಾಗೂ ಖಾರದ ಪುಡಿಯನ್ನ ವಶಕ್ಕೆ ಪಡೆಯಲಾಗಿದ್ದು, ಪಿಎಸ್ಐ ನಬಿನಾಯ್ಕ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.